ಮಂಗಳೂರು, ಮೇ 05 (DaijiworldNews/SM): ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಬರೋಬ್ಬರಿ ಏರಿಕೆಯಾಗಿದೆ. ಬುಧವಾರದಂದು ದ.ಕ. ಜಿಲ್ಲೆಯಲ್ಲಿ 1,529 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಉಡುಪಿ ಜಿಲ್ಲೆಯಲ್ಲಿ 1655 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಉಭಯ ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ದ.ಕ. ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್
ಬುಧವಾರ ದ.ಕ. ಜಿಲ್ಲೆಯಲ್ಲಿ 1,529 ಮಂದಿಗೆ ಸೋಂಕು ದೃಢ
ಬುಧವಾರ ನಾಲ್ವರು ಕೊರೋನಾ ಸೋಂಕಿಗೆ ಬಲಿ
608 ಮಂದಿ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್
ಕೊರೋನಾದಿಂದ ಜಿಲ್ಲೆಯಲ್ಲಿ ಈವರೆಗೆ 768 ಮಂದಿ ಮೃತ್ಯು
ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 50,345 ಪಾಸಿಟಿವ್ ಕೇಸ್ ಪತ್ತೆ
ಜಿಲ್ಲೆಯಲ್ಲಿ ಒಟ್ಟು 9,331 ಮಂದಿ ಪ್ರಸ್ತುವ ಚಿಕಿತ್ಸೆಪಡೆಯುತ್ತಿದ್ದಾರೆ
ಉಡುಪಿ ಜಿಲ್ಲೆಯ ಕೋವಿಡ್ ರಿಪೋರ್ಟ್:
ಉಡುಪಿಯಲ್ಲೂ ಏಕಾಏಕಿ ಸೋಂಕಿತರ ಸಂಖ್ಯೆ ಹೆಚ್ಚಳ
ಬುಧವಾರದಂದು ಜಿಲ್ಲೆಯಲ್ಲಿ 1655 ಮಂದಿಗೆ ಸೋಂಕು
ಕೊರೋನಾ ಸೋಂಕಿಗೆ ಬುಧವಾರ ಮೂವರು ಬಲಿ
ಈವರೆಗೆ ಕೋವಿಡ್ ನಿಂದ 206 ಮಂದಿ ಸಾವು
ಜಿಲ್ಲೆಯಲ್ಲಿ 3926 ಸಕ್ರೀಯ ಪ್ರಕರಣಗಳಿವೆ
ಬುಧವಾರದಂದು 433 ಮಂದಿ ಗುಣಮುಖ
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರು 31233 ಮಂದಿ
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 35365 ಕ್ಕೆ ಏರಿಕೆ