ಮಂಗಳೂರು, ಮೇ 05 (DaijiworldNews/MB) : ಫಾದರ್ ಮುಲ್ಲರ್ ಆಸ್ಪತ್ರೆಯ ಮಾಜಿ ನಿರ್ದೇಶಕರಾದ 85 ವರ್ಷದ ಫಾ. ಪೀಟರ್ ಎಸ್ ನೊರೊನ್ಹಾ ಅವರು ಮೇ 5 ರ ಬುಧವಾರ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.
ನಗರದ ಬೋಂದೆಲ್ ಮೂಲದವರಾದ ಫಾ. ಪೀಟರ್ ಅವರು ಜನವರಿ 31, 1936 ರಂದು ಜನಿಸಿದರು. 1961 ಡಿಸೆಂಬರ್ 4 ರಂದು ಪಾದ್ರಿಯಾಗಿ ನೇಮಕಗೊಂಡರು.
ಫಾ. ಪೀಟರ್ ಅವರು ಬಜ್ಪೆ ಹಾಗೂ ಬಿಜೈ ಪ್ರಾಂತ್ಯದ ಸಹಾಯಕ ಪಾದ್ರಿಯಾಗಿ ಹಾಗೂ ಕಾಟಿಪಳ್ಳ, ಉಡುಪಿ, ಬಂಟ್ವಾಳ (ಮೊಡಂಕಾಪು) ಹಾಗೂ ಬೆಂದೂರು ಪ್ರಾಂತ್ಯದಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದರು.
ಅವರು 1978 ರಿಂದ 1988 ರವರೆಗೆ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ನಂತರ, ಅವರು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದು ಬಳಿಕ ನಿವೃತ್ತರಾದರು. ನಿವೃತ್ತಿಯ ನಂತರ ಅವರು ಜೆಪ್ಪುವಿನ ಸೇಂಟ್ ಝೂಝ್ ವಾಝ್ ನಿವಾಸದಲ್ಲಿ ವಾಸಿಸುತ್ತಿದ್ದರು.