ಮಂಗಳೂರು, ಮೇ 05 (DaijiworldNews/MS): ದ.ಕ. ಜಿಲ್ಲೆಗೆ ಮಂಗಳವಾರ ಬೆಂಗಳೂರಿನಿಂದ 7 ಸಾವಿರ ಡೋಸ್ ಕೊವಿಶೀಲ್ಡ್ ಲಸಿಕೆ ಬಂದಿದೆ. , ಬುಧವಾರದಿಂದ ಜಿಲ್ಲೆಯ ತಾಲೂಕು, ಜಿಲ್ಲಾ ಆಸ್ಪತ್ರೆಯ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟದಲ್ಲೂ ಲಸಿಕೆ ನೀಡಲಾಗುತ್ತದೆ. ಎರಡನೇ ಡೋಸ್ ಪಡೆಯು ವವರಿಗೆ ಮಾತ್ರ ಅವಕಾಶ.
ಮಂಗಳವಾರ ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ 166 ಮಂದಿಗೆ ಮೊದಲ ಡೋಸ್ ಹಾಗೂ 472 ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇದಲ್ಲದೆ ಎರಡು ದಿನಗಳಲ್ಲಿ ಕೊವ್ಯಾಕ್ಸಿನ್ ಕೂಡ ಜಿಲ್ಲೆಗೆ ಬರಲಿದೆ. ಹೀಗಾಗಿ ಕೊವ್ಯಾಕ್ಸಿನ್ ಲಸಿಕೆ 2ನೇ ಡೋಸ್ ಪಡೆಯುವವರು ಗಾಬರಿಪಡಬೇಕಿಲ್ಲ. ಪ್ರಥಮ ಡೋಸ್ ಪಡೆದು 10ರಿಂದ 12 ವಾರಗಳಾದರೂ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಕಿಲ್ಲ. ಲಸಿಕೆ ಬಂದ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.