ವಿಟ್ಲ, ಸೆ 24 (MSP): ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಹಗ್ಗ ಸಿಲುಕಿ 8ನೇ ತರಗತಿ ಬಾಲಕಿ ಸಾವನಪ್ಪಿದ್ದ ಘಟನೆ ವಿಟ್ಲ ಕಸಬಾ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ವಿಟ್ಲದ ಮೆನ್ಸ್ ಪಾರ್ಕ್ ಡ್ರೆಸ್ ಸೆಂಟರ್ ಮಾಲೀಕರ ನಾಸೀರ್ ಅವರ ಪುತ್ರಿ, ವಿಟ್ಲ ಕಸಬಾ ಗ್ರಾಮದ ಮೇಗಿನ ಕಾಂತಡ್ಕ ನಿವಾಸಿ ನಾದಿಯಾ(13)ಎಂದು ಗುರುತಿಸಲಾಗಿದೆ.
ಬಾಲಕಿ ತನ್ನ ಮನೆಯ ಕೊಠಡಿಯಲ್ಲಿ ಬಾಗಿಲು ಹಾಕಿ ಜೋಕಾಲಿಯಲ್ಲಿ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಆದರೆ ಇದನ್ನು ಬಾಲಕಿ ಮನೆಯವರು ನಿರಾಕರಿಸಿದ್ದಾರೆ. ಬಾಲಕಿಗೆ ಈ ಹಿಂದೆಯೇ ಅನಾರೋಗ್ಯ ಕಾಡುತ್ತಿದ್ದು, ಮಗು ಆಟವಾಡುತ್ತಿದ್ದ ವೇಳೆ ಮೃತಪಟ್ಟಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಭಾನುವಾರ ರಾತ್ರಿಯೇ ಶವವನ್ನು ದಫನ ಮಾಡಲಾಗಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಮೃತ ವಿದ್ಯಾರ್ಥಿನಿಯ ಶೋಕಾರ್ಥ ಆಕೆ ಅಭ್ಯಾಸಿಸುತ್ತಿದ್ದ ವಿಟ್ಲದ ಜೇಸಿ ಶಾಲೆಗೆ ಸೋಮವಾರ ರಜೆ ಸಾರಲಾಗಿದೆ.