ಉಡುಪಿ, ಮೇ 05 (DaijiworldNews/MB) : ಲಾಕ್ಡೌನ್ ಸಂದರ್ಭದಲ್ಲಿ ಜನರಲ್ ಸ್ಟೋರ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತದೆ.
ಕುಂದಾಪುರದ ಬೆಳ್ವೆಯ ಹೆಂಗವಳ್ಳಿ ಗ್ರಾಮದಲ್ಲಿರುವ ದುರ್ಗಾ ಜನರಲ್ ಸ್ಟೋರ್ ಈ ಕೃತ್ಯ ನಡೆಸುತ್ತಿದೆ ಎನ್ನಲಾಗಿದೆ. ಅಂಗಡಿಯ ಮಾಲೀಕರನ್ನು ಸುಧಾಕರ್ ನಾಯಕ್ ಎಂದು ಗುರುತಿಸಲಾಗಿದ್ದು, ಅಕ್ರಮ ಮದ್ಯ ಮಾರಾಟದ ವೇಳೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಾರೆ.
ಅವರ ಗೋದಾಮಿನಲ್ಲಿ ಹಲವಾರು ಲಕ್ಷ ರೂಪಾಯಿ ಮೌಲ್ಯದ ಮದ್ಯವೂ ಪತ್ತೆಯಾಗಿದೆ.
ಸುಧಾಕರ್ ನಾಯಕ್ ವಿರುದ್ಧ ಪದೇ ಪದೇ ದೂರುಗಳ ಬರುತ್ತಿದ್ದರೂ ಪೊಲೀಸ್ ಠಾಣೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ವಿಷಯದಲ್ಲಿ ಜಿಲ್ಲಾಡಳಿತದ ಉದಾಸೀನತೆಯ ಬಗ್ಗೆ ಅವರು ದುಃಖ ವ್ಯಕ್ತಪಡಿಸಿದ್ದಾರೆ.