ಸುಳ್ಯ, ಸೆ 24 (MSP): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಎಸ್ ಐ ಟಿ ಪೊಲೀಸರಿಂದ ನೊಟೀಸ್ ಪಡೆದು ಬಂಧನ ಭೀತಿ ಎದುರಿಸುತ್ತಿರುವ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಪರಿಸರದ ನಾಲ್ವರ ಜಾಮೀನು ಅರ್ಜಿಯ ತೀರ್ಪನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು (ಸೆ.24 )ರಂದು ನೀಡಲಿದೆ.
ಕೊಲ್ಲಮೊಗ್ರದ ಚಾಂತಳ ಮೋಹನ್ , ಯತೀಶ್, ಕುಮುದಾಕ್ಷ ಜಾಲುಮನೆ, ಯತಿನ್ ಅಂಬೆಕಲ್ಲು ಅವರಿಗೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂದಿಸಿ ಆ.27 ಕ್ಕೆ ಬೆಂಗಳೂರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐ ಟಿ ಪೊಲೀಸರು ನೋಟೀಸ್ ನೀಡಿದ್ದರು. ಆದರೆ ಈ ನಾಲ್ವರು ವಿಚಾರಣೆಗೆ ಹಾಜರಾಗದೆ ನಿರೀಕ್ಷಣಾ ಜಾಮೀನಿಗಾಗಿ ಜಿಲ್ಲಾ 1 ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ತೀರ್ಪು 22 ಕ್ಕೆ ಪ್ರಕಟವಾಗಬೇಕಿತ್ತಾದರೂ ಅದು ಸೆ. 24 ಕ್ಕೆ ಮುಂದೂಡಲ್ಪಟ್ಟಿತ್ತು. ಆರೋಪಿಗಳ ಪರ ಎಸ್.ಪಿ ಚೆಂಗಪ್ಪ ವಾದಿಸಿದ್ದರು.