ಮಂಗಳೂರು, ಮೇ 01 (DaijiworldNews/MB) : ಮೇ 1 ರಂದು ವಿಶ್ವ ಕಾರ್ಮಿಕ ದಿನ ಅಂಗವಾಗಿ ಅನೇಕ ದೇಶಗಳಲ್ಲಿ ಸಾರ್ವಜನಿಕ ರಜೆಯಿದೆ. ವಿಶ್ವದಾದ್ಯಂತ ಕಾರ್ಮಿಕರಿಗಾಗಿ ಮೀಸಲಾಗಿರುವ ದಿನವಾದ ಅಂತರರಾಷ್ಟ್ರೀಯ ಕಾರ್ಮಿಕ ದಿನವಾದರೂ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನಗರದಲ್ಲಿ ಪೌರ ಕಾರ್ಮಿಕರು ರಜೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ.
ಶನಿವಾರ, ಅನೇಕ ಪೌರ ಕಾರ್ಮಿಕರು ಕಸವನ್ನು ಸಂಗ್ರಹಿಸುವುದು, ಮಾರುಕಟ್ಟೆ ರಸ್ತೆ, ಪಿವಿಎಸ್ ಮತ್ತು ಸ್ಟೇಟ್ ಬ್ಯಾಂಕ್ನಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಕಂಡುಬಂದಿದೆ. ನಗರದ ನಿರ್ಮಾಣ ಕಾರ್ಯಗಳನ್ನು ಸಹ ಕೆಲವು ಕಾರ್ಮಿಕರು ನಡೆಸುತ್ತಿದ್ದಾರೆ.
ಉತ್ತರ ಕರ್ನಾಟಕದ ಹಲವಾರು ಕಾರ್ಮಿಕರು ನಗರದಲ್ಲಿ ತಮ್ಮ ಜೀವನೋಪಾಯಕ್ಕಾಗಿ ನಗರದಲ್ಲಿ ಪೌರ ಕಾರ್ಮಿಕರು, ಕಟ್ಟಕ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಮಿಕರನ್ನು ಆಚರಿಸು ಮೇ ದಿನವು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಪ್ರತೀಕವಾಗಿದೆ. ಪ್ರತಿ ವರ್ಷ ವಿಶ್ವ ಕಾರ್ಮಿಕರ ದಿನವನ್ನು ಮೇ 1 ರಂದು ಆಚರಿಸಲಾಗುತ್ತದೆ. ಕಾರ್ಮಿಕ ಸಂಘ ನಡೆಸಿ ಚಳುವಳಿಯ ಹಿನ್ನೆಲೆಯನ್ನು ಈ ದಿನ ಹೊಂದಿದೆ. ಭಾರತ, ಕ್ಯೂಬಾ, ಚೀನಾ ಮತ್ತು ಇತರ ಹಲವು ದೇಶಗಳಲ್ಲಿ ಮೇ ದಿನವನ್ನು ಆಚರಿಸಲಾಗುತ್ತದೆ.
ಸಾಂಕ್ರಾಮಿಕ ರೋಗವು ದೇಶವನ್ನು ಅಪ್ಪಳಿಸುತ್ತಿರುವುದರಿಂದ, ವಿಶ್ವ ಕಾರ್ಮಿಕ ದಿನಾಚರಣೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಜನರಿಗೆ ಅವಕಾಶವಿಲ್ಲ.