ಉದಯ್ಪುರ, ಸೆ22(SS): ಮೋದಿ ಅವರು ತಾವು ದೇಶದ ಪ್ರಧಾನಿ ಅಲ್ಲ, ದೇಶದ ಕಾವಲುಗಾರ ಎಂದು ಹೇಳಿದ್ದರು. ಆದರೆ ದೇಶದ ಕಾವಲುಗಾರ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಮೋದಿ ಅವನೊಬ್ಬ ಕಳ್ಳ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಉದಯ್ಪುರ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಪ್ರದೇಶ ಸಾಗ್ವಾರಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಅವರು ಮಾತನಾಡಿದರು, ಮೋದಿ ಅವರು ಹೋದ ಕಡೆ ಎಲ್ಲಾ ತಾವು ದೇಶದ ಪ್ರಧಾನಿ ಅಲ್ಲ, ದೇಶದ ಕಾವಲುಗಾರ ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಈಗ ರಾಜಸ್ಥಾನದ ಬೀದಿ ಬೀದಿಯಲ್ಲಿ ದೇಶದ ಚೌಕಿದಾರ ಕಳ್ಳ ಎಂಬ ಮಾತೇ ಕೇಳಿ ಬರುತ್ತಿದೆ ಎಂದು ರಾಹುಲ್ ವ್ಯಂಗ್ಯ ಮಾಡಿದ್ದಾರೆ.
ರಫೆಲ್ ಡೀಲ್ ವಿಷಯದಲ್ಲಿ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಮಾತ್ರವಲ್ಲ ವಿಜಯ್ ಮಲ್ಯನನ್ನು ಭಾರತಕ್ಕೆ ಹಿಂತಿರುಗಿ ಕರೆತರುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಈ ಎಲ್ಲಾ ವೈಫಲ್ಯದ ವಿಷಯವನ್ನಿಟ್ಟಿಕೊಂಡು ಪ್ರಧಾನಿ ವಿರುದ್ಧ ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.