ಬಂಟ್ವಾಳ, ಏ 30(DaijiworldNews/MS): ಪುದು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಲಕ್ಷ್ಮಿ (53) ಅವರು ಹೃದಯಾಘಾತದಿಂದ ಗುರುವಾರ ನಿಧನರಾದರು.
ಗ್ರಾಮದ ಕುಮ್ಡೇಲು ನಿವಾಸಿಯಾದ ಅವರು ಮಾರಿಪಳ್ಳ ಪೇರಿಮಾರ್ ವಾರ್ಡ್ ನಿಂದ ಸತತ ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ವಾರ್ಡ್ ಮತ್ತು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಲಕ್ಷ್ಮಿ ಅವರು, ಹಾಲಿ ಪುದು ಪಂಚಾಯತಿನ ಸದಸ್ಯರೂ ಆಗಿದ್ದಾರೆ.
ಮೃತರು ಪತಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಲಕ್ಷ್ಮಿ ಅವರ ನಿಧನಕ್ಕೆ ಶಾಸಕ ಯು.ಟಿ.ಖಾದರ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಪುದು ಪಂಚಾಯತ್ ಪಂಚಾಯತ್ ಸರ್ವ ಸದಸ್ಯರು, ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.