ಉಡುಪಿ, ಏ.28 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಬುಧವಾರ 664 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ದಿನವೇ 326 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
ಬುಧವಾರ ದೃಢಪಟ್ಟ 664 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30314 ಏರಿಕೆಯಾಗಿದೆ.
ಈ ಪೈಕಿ 2230 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಉಡುಪಿ ತಾಲೂಕಿನಲ್ಲಿ 332, ಕುಂದಾಪುರದಲ್ಲಿ 249, ಕಾರ್ಕಳದಲ್ಲಿ 76 ಮಂದಿಗೆ ಹಾಗೂ ಇತರೆ ಜಿಲ್ಲೆಯ 7 ಮಂದಿಗೆ ಕೊರೊನಾ ದೃಢಪಟ್ಟಿದೆ. ಈವರೆಗೆ 498448 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಬುಧವಾರ 326 ಸೋಂಕಿತರು ಬಿಡುಗಡೆಯಾಗಿದ್ದು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 27890 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 194 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇನ್ನು ಈವರೆಗೆ 185605 ಮಂದಿ ಮೊದಲ ಡೋಸ್ ಕೊರೊನಾ ಲಸಿಕೆ ಹಾಗೂ 47760 ಮಂದಿ ಎರಡನೇ ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.