ಪಡುಪಣಂಬೂರು, ಎ.28 (DaijiworldNews/PY): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಪಡುಪಣಂಬೂರು ಕಿರು ಸೇತುವೆಯ ಕೆಳಗೆ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ಮೃತದೇಹ ನೀರಿನಲ್ಲಿ ತೇಲುತ್ತಿದ್ದು, ಸುಮಾರು 50-60ರ ವಯಸ್ಸಿನವರಾಗಿದ್ದು, ಮೃತದೇಹ ನೀರಿನಲ್ಲಿ ಬಿದ್ದು ತುಂಬಾ ದಿನಗಳಾಗಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಹೆದ್ದಾರಿಯಲ್ಲಿನ ನಿರುಪಯುಕ್ತ ಹುಲ್ಲುಗಳನ್ನು ಕೀಳುತ್ತಿರುವ ಕಾರ್ಮಿಕರಿಗೆ ಈ ಮೃತದೇಹ ಕಂಡು ಬಂದಿದ್ದು, ಕೂಡಲೇ ಅವರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.