ಮಂಗಳೂರು, ಏ 28 (DaijiworldNews/MS) : ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವಾಚ್ಯವಾಗಿ ನಿಂದಿಸಿ ಫೇಸ್ಬುಕ್ ಖಾತೆಯಲ್ಲಿ ವಿಕೃತವಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬರ ವಿರುದ್ದ ಬಿಜೆಪಿ ಮುಖಂಡ ಫಝಲ್ ಅಸೈಗೋಳಿ ಪೊಲೀಸ್ ದೂರು ದಾಖಲಿಸಿದ್ದಾರೆ.
"ಲುಕ್ಮನ್ ಅಡ್ಯಾರ್ ಎಂಬ ಎಂಬ ಫೇಸ್ಬುಕ್ ಖಾತೆ ಹೊಂದಿದ್ದ ವ್ಯಕ್ತಿ ಫೇಸ್ಬುಕ್ ಪೋಸ್ಟ್ ನಲ್ಲಿ ದೇಶದ ಪ್ರಧಾನಿಯನ್ನು ಏಕವಚನದಲ್ಲಿ ಸಂಭೋಧಿಸಿದ್ದಲ್ಲದೆ, ಪ್ರಧಾನಿ ಸಾವನ್ನಪ್ಪಲಿ ಎಂಬರ್ಥದಲ್ಲಿ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದಾರೆ. ದೇಶದ ವಿರುದ್ದ ಸಮರ ಸಾರುವ ಹಾಗೂ ದೇಶದಾದ್ಯಂತ ವಿವಿಧ ಜಾತಿ ಮತಗಳ ಮಧ್ಯೆ ವಿಷಬೀಜುವ ಬಿತ್ತುವ ಹಾಗೂ ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಹಾಗೂ ಅರಾಜಕತೆಯನ್ನು ಸೃಷ್ಟಿಸುವ ಲೇಖನ ಬರೆದು ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ" ಎಂದು ಫಝಲ್ ಅಸೈಗೋಳಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ವೇಳೆ ಬಿಜೆಪಿ ಮುಖಂಡ ವಕೀಲ ಮುಹಮ್ಮದ್ ಅಸ್ಗರ್ ಜೊತೆಗಿದ್ದರು.