ಕೋಟ, ಏ 28 (DaijiworldNews/MS): ಕಾರಿನಲ್ಲಿ ಮನೆಯಿಂದ ಹೊರಹೋಗಿದ್ದ ಪೆರ್ಡೂರು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿರುವ , ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ, ಪ್ರಧಾನ ನಗರದ ನಿವಾಸಿ ಯಾಗಿರುವ ಪತಿ , ಉದಯ ಹೆಗಡೆ (37) ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಅಶ್ವಿನಿ ಹೆಗಡೆ ದೂರು ದಾಖಲಿಸಿದ್ದಾರೆ.
ಯಕ್ಷಗಾನ ಕಲಾವಿದೆ ಹಾಗೂ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಶ್ವಿನಿ ಅವರು ನಾಲ್ಕು ವರ್ಷದ ಹಿಂದೆ ಯಕ್ಷಗಾನ ಕಲಾವಿದರಾದ ಉದಯ ಹೆಗಡೆ ಅವರನ್ನು ವಿವಾಹವಾಗಿದ್ದು, ಏ.21 ರಂದು ಸಂಜೆ 6 ಗಂಟೆಗೆ ಉದಯ ಹೆಗಡೆ ಸ್ವಂತ ಆಲ್ಟೋ ಕಾರಿನಲ್ಲಿ ಮನೆಯಿಂದ ಹೊರಟಿದ್ದು ಹಿಂತಿರುಗಿಲ್ಲ. ಮೊಬೈಲ್ ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು ಹಾಗೂ ಪತಿಯ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ಕೋಟ ಪೊಲೀಸ್ ಠಾಣಾ ದೂರು ಪತ್ನಿ ಅಶ್ವಿನಿ ನೀಡಿದ್ದಾರೆ