ಮಂಗಳೂರು, ಸೆ 21(SM): ನಗರ ಹೊರವಲಯದ ವಳಚ್ಚಿಲ್ ಬಳಿ ಇರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮರಳು ಅಡ್ಡೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಭಾರೀ ಪ್ರಮಾಣದ ಮರಳು ವಶಪಡಿಸಿಕೊಂಡಿದೆ.
ಗುರುವಾರ ತಡರಾತ್ರಿ ದಾಳಿ ನಡೆದಿದ್ದು, ಕೆಲವು ಆರೋಪಿಗಳು ಪರಾರಿಯಾಗಿದ್ದಾರೆ. ವಳಚ್ಚಿಲ್ನ ಅಡ್ಯಾರ್ ಪದವು ಎಂಬಲ್ಲಿ ಈ ದಾಳಿ ನಡೆದಿದ್ದು, ಸುಮಾರು 150 ಲೋಡ್ನಷ್ಟು ಮರಳು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮರಳುಗಾರಿಕೆಗೆ ಬಳಸಲಾಗುತ್ತಿದ್ದ 8 ಇಂಜಿನ್ಗಳು, 5 ಗ್ಯಾಸ್ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.