ಬಂಟ್ವಾಳ, ಸೆ 21 (MSP): ಶಾಲೆಗೆ ಹೋಗುವ ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ, ಪ್ರಕರಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಂಟ್ವಾಳ ಪುರಸಭಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಮಹಿಳೆಯರು ಸಮಾಜದ ಎಲ್ಲಾ ರಂಗದಲ್ಲಿ ಮುಂದೆ ಬರುತ್ತಿರುವ ಈ ಕಾಲದಲ್ಲಿ, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರವುದು, ಅದರಲ್ಲೂ ಎಳೆ ವಯಸ್ಸಿನ ಹೆಣ್ಣುಮಕ್ಕಳು ಇಂತಹ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ಇಂತಹ ಘಟನೆ ಗಳಿಂದ ನಾಗರಿಕ ಸಮಾಜವು ತಲೆತಗ್ಗಿಸುವಂತಾಗಿದೆ.
ಸಂತ್ರಸ್ಥೆಗೆ ನ್ಯಾಯ, ಭದ್ರತೆ ಹಾಗೂ ಸೂಕ್ತ ಪರಿಹಾರ ಒದಗಿಸುವಂತೆ ಮತ್ತು ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ತಹಶಿಲ್ದಾರರಿಗೆ ಹಾಗೂ ಸಹಾಯಕ ಪೊಲೀಸ್ ಆಯಕ್ತರಿಗೆ ಎಸ್.ಡಿ.ಪಿಐ ನಿಯೋಗ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಮೊನೀಶ್ ಆಲಿ, ಕ್ಷೇತ್ರ ಸಮಿತಿ ಅಧ್ಯಕ್ಷ ಯುಸುಫ್ ಆಲಡ್ಕ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಐ.ಎಮ್, ಆರ್ ಇಕ್ಬಾಲ್, ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್, ಕ್ಷೇತ್ರ ಸಮಿತಿ ಕೋಶಾಧಿಕಾರಿ ಅಬೂಬಕ್ಕರ್ ಮದ್ದ, ಪುರಸಭಾ ಸಮಿತಿ ಕಾರ್ಯದರ್ಶಿ ಸಿದ್ದೀಕ್ ನಂದರಬೆಟ್ಟು, ಕೋಶಾಧಿಕಾರಿ ಇಕ್ಬಾಲ್ ಎನ್, ಪುರಸಭೆಯ ಚುನಾಯಿತ ಸದಸ್ಯರುಗಳಾದ ಇದ್ರೀಸ್ ಪಿ.ಜೆ, ಶಂಸಾದ್, ಝೀನತ್ ಮೊದಲಾದವರು ಉಪಸ್ಥಿತರಿದ್ದರು.