ಕಾರವಾರ, ಸೆ 20(SM): ಕಾರವಾರದ ಅರಬ್ಬಿ ಸಮುದ್ರ ತೀರದಲ್ಲಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್ ವೊಂದನ್ನು ರಕ್ಷಣೆ ಮಾಡಲಾಗಿದೆ.
ಕಾರವಾರ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೋಟ್ ನಲ್ಲಿದ್ದ 17 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಕಾರವಾರದ ಬೈತಖೋಲ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಯಶವರ್ಧನ ಹೆಸರಿನ ಬೋಟ್ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋಟಿನಲ್ಲಿ ನೀರು ತುಂಬಿ ಮುಳುಗುವ ಹಂತದಲ್ಲಿತ್ತು. ತಕ್ಷಣ ಬೋಟಿನಲ್ಲಿದ್ದ ಮೀನುಗಾರರು ರಕ್ಷಣೆಗಾಗಿ ಸಂದೇಶ ಕಳುಹಿಸಿದ್ದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೋಸ್ಟ್ಗಾರ್ಡ್ ಸಿಬ್ಬಂದಿಗಳು ಎಲ್ಲಾ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಮತ್ತೊಂದು ಬೋಟ್ ಸಹಾಯದಿಂದ ಮುಳುಗುವ ಹಂತದಲ್ಲಿದ್ದ ಬೋಟ್ ನ್ನು ದಡಕ್ಕೆ ತರಲಾಗಿದೆ. ಆ ಮೂಲಕ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.