ಶಿರ್ವ, ಸೆ20 (MSP): ಸೌದಿಯಲ್ಲಿ ನರ್ಸ್ ಹೆಝಲ್ ಜೋತ್ನ್ಸಾ ಮೃತಪಟ್ಟು ಎರಡು ತಿಂಗಳು ಕಳೆದರೂ ಶವ ಇನ್ನೂ ಭಾರತಕ್ಕೆ ರವಾನೆಯಾಗಿಲ್ಲ.ಇದೀಗ ಅಲ್ ಮಿಕ್ವಾದ ಸರಕಾರಿ ಆಸ್ಪತ್ರೆಯ ಕ್ವಾಟರ್ಸ್ ನಲ್ಲಿ ಆತ್ಮಹತ್ಯೆಗೈದ ನರ್ಸ್ ಹೆಝಲ್ ಶವ ರವಾನೆಗೆ ಸೌದಿ ರಾಯಭಾರ ಕಚೇರಿಯಿಂದ ನಿರಾಕ್ಷೇಪಣಾ ಪತ್ರ ಲಭಿಸಿದೆ.
ಈಗಾಗಲೇ ಇದಕ್ಕೆ ಸಂಬಂಧಿಸಿದ ಅಂತಿಮ ಪ್ರಕ್ರಿಯೆಗಳು ನಡೆದಿದ್ದು, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಶವ ಸ್ವೀಕರಿಸಲು ಆಕೆಯ ತಂದೆ ರೋಬರ್ಟ್ ಕ್ವಾಡ್ರಸ್ ಅವರ ಆಧಾರ್ ಕಾರ್ಡ್ ಪ್ರತಿಯನ್ನು ಸೌದಿಗೆ ಕಳುಹಿಸಿಕೊಡಲಾಗಿದೆ. ಇದಲ್ಲದೆ ಶವ ಪ್ಯಾಕಿಂಗ್ ಗಾಗಿ ರಿಯಾದ್ ಗೆ ತೆರಳಬೇಕಾಗಿದ್ದು, ಸೌದಿಯಲ್ಲಿ ವಾರದ ಕೊನೆಯಲ್ಲಿ ರಜೆಯಾದ ಕಾರಣ ಮುಂದಿನ ವಾರ ರವಾನೆಯಾಗಲಿದೆ ಎಂದು ತಿಳಿದುಬಂದಿದೆ.
ಜು.19 ರಂದು ಹೆಝಲ್ ಅಲ್ ಮಿಕ್ಆದ ಸರಕಾರಿ ಆಸ್ಪತ್ರೆಯ ಕ್ವಾಟರ್ಸ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಪವರ್ ಆಫ್ ಆರ್ಆರ್ನಿ ಹೋಲ್ಡರ್ ಡೆನ್ನಿಸ್ ನೊರೊನ್ಃಆ ಮೃತದೇಹ ಊರಿಗೆ ತರಲು ಪ್ರಯತ್ನ ಮುಂದುವರಿಸಿದ್ದು, ಭಾನುವಾರ ಶವ ರವಾನೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿದು ಬಂದಿದೆ.