ಕಾಸರಗೋಡು, ಎ.24 (DaijiworldNews/PY): ಮನೆಗೆ ನುಗ್ಗಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವುಗೈದ ಪ್ರಕರಣದ ಆರೋಪಿಯೋರ್ವನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನೆಲ್ಲಿಕಟ್ಟೆ ಪೆಲ್ತಡ್ಕದ ನಿವಾಸಿ ಪಿ.ಎಂ.ನವಾಝ್ (38) ಎಂದು ಗುರುತಿಸಲಾಗಿದೆ.
ಎಡನೀರು ಪೆರಡಾಲಮೂಲೆಯ ಚಂದ್ರಕಲಾ ಎಂಬವರ ಮನೆಗೆ ನುಗ್ಗಿ ಮೂರು ಪವನ್ ಚಿನ್ನಾಭರಣ, ಮೊಬೈಲ್ ಫೋನ್ ಹಾಗೂ 5,000 ಸಾವಿರ ರೂ. ನಗದು ಕಳವುಗೈದ ಪ್ರಕರಣದ ಆರೋಪಿಯಾಗಿದ್ದಾನೆ.
"ಆಗಸ್ಟ್ 20 ರಂದು ಹಾಡಹಗಲೇ ಕೃತ್ಯ ನಡೆದಿತ್ತು. ನವಾಝ್ 25ಕ್ಕೂ ಅಧಿಕ ಕಳವು ಪ್ರಕರಣಗಳ ಆರೋಪಿಯಾಗಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಬದಿಯಡ್ಕ, ಮಂಜೇಶ್ವರ, ಕುಂಬಳೆ, ಕಾಸರಗೋಡು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ" ಎಂದು ಪೊಲೀಸರು ತಿಳಿಸಿದ್ದಾರೆ .