ಮಂಗಳೂರು, ಏ 24 (DaijiworldNews/MS): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಿಚನ್ವೇರ್, ಗ್ಯಾಸ್ ಲೈಟರ್ಗಳು, ಎಂಪಿ 3 ಪ್ಲೇಯರ್ ಮತ್ತು ಇಯರ್ಫೋನ್ನಲ್ಲಿ ಪಾದರಸ ಲೇಪಿತ ಕಳ್ಳಸಾಗಣೆ ಮಾಡುತ್ತಿದ್ದ 196 ಗ್ರಾಂ ಚಿನ್ನವನ್ನು ಏ.23ರ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧ ಕಾಸರಗೋಡು ಮೂಲಕ ಪೊ ಕುಡ್ಲು ಅಬ್ದುಲ್ ರಹೀಮ್ ಎರಿಯಲ್ ಜಾಫರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನ ಐಎಕ್ಸ್ 384 ಮೂಲಕ ಮಂಗಳೂರಿಗೆ ಆಗಮಿಸಿದ್ದ.
ವಶಪಡಿಸಿಕೊಳ್ಳಲಾದ ಚಿನ್ನದ ಮೌಲ್ಯ 9.6 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಐಆರ್ ಎಸ್ ನ ಉಪ ಆಯುಕ್ತ ಪ್ರವೀಣ್ ಕಂಡಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಅಧಿಕಾರಿಗಳಾದ ನಾಗೇಶ್ ಕುಮಾರ್, ಅಧೀಕ್ಷಕರು, ನವೀನ್ ಕುಮಾರ್ ಹಾಗೂ ಇತರ ಅಧಿಕಾರಿಗಳು ತಂಡದಲ್ಲಿದ್ದರು.