ಕಾಸರಗೋಡು, ಏ.23 (DaijiworldNews/HR): ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರವನ್ನು ದಾಟಿದ್ದು, ಕೊರೊನಾದ ಎರಡನೇ ಅಲೆ ಆತಂಕಕಾರಿಯಾಗಿ ಕಾಡುತ್ತಿದ್ದು, ಶುಕ್ರವಾರ 1,110 ಮಂದಿಗೆ ಸೋಂಕು ದೃಢಪಟ್ಟಿದ್ದು, 247 ಮಂದಿ ಗುಣಮುಖರಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 6,776 ಮಂದಿ ಈಗ ಚಿಕಿತ್ಸೆಯ ಪಡೆಯುತ್ತಿದ್ದು, 10,436 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಒಟ್ಟು 41,405 ಮಂದಿಗೆ ಇದುವರೆಗೆ ಸೋಂಕು ದೃಢಪಟ್ಟಿದ್ದು, 34, 282 ಮಂದಿ ಗುಣಮುಖರಾಗಿದ್ದಾರೆ.