ನವದೆಹಲಿ,ಸೆ 19 (MSP): ಯಾಕೋ ಮೋದಿ ಅವರನ್ನು ಟೀಕಿಸಲು ಹೋಗಿ ಪದೇ ಪದೇ ಯಟವಟ್ಟು ಮಾಡಿಕೊಳ್ತಾ ಇದ್ದಾರೆ, ಸ್ಯಾಂಡಲ್ ವುಡ್ ನಟಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಸ್ಥೆ ರಮ್ಯಾ ಯಾನೆ ದಿವ್ಯ ಸ್ಪಂದನ. ಪ್ರಧಾನಿ ಮೋದಿ ವಿದ್ಯಾರ್ಹತೆ ಬಗ್ಗೆ ಈ ಬಾರಿಯೂ ಟೀಕಿಸಲು ಹೋಗಿ ರಮ್ಯಾ ಕೈ ಸುಟ್ಟುಕೊಂಡಿದ್ದಾರೆ. ಪ್ರಧಾನಿಯನ್ನು ಟೀಕಿಸಲು ವಿಡಿಯೋವೊಂದನ್ನು ಪ್ರಕಟಿಸಿದ್ದ ರಮ್ಯಾ ಟ್ವಿಟರಿಗರ ಕೈಯಲ್ಲಿ ಮಂಗಳಾರತಿ ಮಾಡಿಸಿಕೊಂಡ ಬಳಿಕ ಕ್ಷಮೆ ಯಾಚಿಸಿದ್ದಾರೆ.
1998 ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಮೋದಿಯವನ್ನು ಆಗ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ಹಾಲಿ ಬಿಜೆಪಿ ಸಂಸದ ರಾಜೀವ್ ಶುಕ್ಲಾ ಅದೊಮ್ಮೆ ಸಂದರ್ಶಿದ್ದ ವಿಡೀಯೋ ದ ಆಯ್ದ ಭಾಗವುಳ್ಳ ವಿಡಿ ಯೋ ಕ್ಲಿಪ್ ಅನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದ ರಮ್ಯಾ " ಇದರಲ್ಲಿ ನಮ್ಮ ಸಾಹೇಬರು( ಮೋದಿ) ತಾವು ಹೈಸ್ಕೂಲಿನವರೆಗೆ ಮಾತ್ರ ಓದಿರುವುದನ್ನು ಹೇಳಿಕೊಂಡಿದ್ದಾರೆ. ಆದರೆ ಈಗ ಸಾಹೇಬರ ಬಳಿ ಪದವಿ ಪ್ರಮಾಣ ಪತ್ರಗಳಿವೆ ಅದು ಎಲ್ಲಿಂದ ಬಂತು? ಎಂದು ಲೇವಡಿ ಮಾಡಿದ್ದಾರೆ.
ಆದರೆ ಅಸಲಿಗೆ ಆ ವಿಡಿಯೋದಲ್ಲಿ ಮೋದಿ ಮೊದಲು ಹೈಸ್ಕೂಲ್ ಶಿಕ್ಷಣ ಮುಗಿಸಿ ಬಳಿಕ ಬಿಎ, ಎಂಎ ಪದವಿಗಳನ್ನು ದೂರಶಿಕ್ಷಣದ ಮೂಲಕ ಪಡೆದಿರುವುದಾಗಿ ಹೇಳಿದ್ದರು. ರಮ್ಯಾ ಟೀಕೆಯ ಬೆನ್ನಲ್ಲೇ ವಿಡಿಯೋದ ಸತ್ಯಾಸತ್ಯತೆಯನ್ನು ಟ್ವೀಟಿಗರು ಹೊರಹಾಕಿ ರಮ್ಯಾಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ವಿವಾದವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ ರಮ್ಯಾ ವಿಡಿಯೋ ಡಿಲೀಟ್ ಮಾಡಿ ಸುಮ್ಮನಾಗಿದ್ದಾರೆ.