ನವದೆಹಲಿ,ಸೆ 19 (MSP): ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯುವುದೆ ಹಿಂದುತ್ವ ಎಂದು ವ್ಯಾಖ್ಯಾನಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ , ಮುಸ್ಲಿಮರು ಸೇರಿದಂತೆ ಎಲ್ಲರನ್ನೂ ಒಪ್ಪಿಕೊಂಡು ಮುಂದುವರಿಯುವುದೇ ಹಿಂದುತ್ವ. ಹಿಂದೂ ರಾಷ್ಟ್ರ ಎಂದರೆ ಅಲ್ಲಿ ಮುಸ್ಲಿಮರಿಗೆ ಜಾಗ ಇಲ್ಲ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ನಾವು ಮುಸ್ಲಿಮರನ್ನು ಒಪ್ಪಿಕೊಳ್ಳದಿದ್ದರೆ ಅದು ಹಿಂದುತ್ವವೇ ಅಲ್ಲ ಎಂದು ಸಂಘದ ನಿಲುವನ್ನು ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ಇವರು ನವದೆಹಲಿಯಲ್ಲಿ ಮೂರು ದಿನಗಳ ನಡೆಯುತ್ತಿರುವ "ಆರೆಸ್ಸೆಸ್ ದೃಷ್ಟಿಕೋನದಲ್ಲಿ ಭವಿಷ್ಯದ ಭಾರತ" ಎಂಬ ವಿಚಾರ ಸಂಕೀರ್ಣದಲ್ಲಿ ಎರಡನೇ ದಿನವಾದ ಮಂಗಳವಾರ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದುಗಳ ಒಗ್ಗಟ್ಟು ಬಯಸುವ ಆರೆಸ್ಸೆಸ್ ಎಲ್ಲಾ ಧರ್ಮದವರ ಹಿತ ಬಯಸುತ್ತದೆ ಹಿಂದುತ್ವ ಎಂದರೆ ಅದು ಎಲ್ಲರನ್ನು ಒಳಗೊಂಡ ಭಾರತೀಯತೆ ಎಂದರ್ಥ. ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಗೆ ಎಲ್ಲ ಧರ್ಮದವರರೂ ಒಂದೇ. ಭಾರತ ವೈವಿಧ್ಯತೆಯನ್ನು ಪ್ರೀತಿಸುತ್ತದೆಯೇ ಹೊರತು, ದ್ವೇಷಿಸುವುದಿಲ್ಲ. ವಿಶ್ವ ಸಹೋದರತೆ ಹಿಂದುತ್ವದ ಪರಂಪರೆಯಾಗಿದೆ. ಹೀಗಾಗಿಯೇ ಸಂಘವು ಭಾರತವನ್ನು ಹಿಂದುರಾಷ್ಟ್ರ ಎಂದು ಕರೆಯಲು ಸಂತೋಷಪಡುತ್ತದೆ ಎಂದು ಹೇಳಿದರು. ಈ ಮೂಲಕ ಆರೆಸ್ಸೆಸ್ ಅಲ್ಲಸಂಖ್ಯಾತರನ್ನು ತುಚ್ಚೀಕರಿಸುತ್ತದೆ ಎಂಬ ಕಾಂಗ್ರೆಸ್ ಟೀಕೆಗೆ ಮಾತಿನೇಟು ನೀಡಿದರು.
ಜಾಗತಿಕ ಸಹೋದರತ್ವ ಸಂಘದ ಮೂಲ ಧ್ಯೇಯ. ಸಹೋದರ ಭಾವನೆ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತ ಹಿಂದೂ ರಾಷ್ಟ್ರ ಎಂಬಪರಿ ಕಲ್ಪನೆಯ ತಳಹದಿ. ಸಮಾಜದ ಎಲ್ಲರನ್ನೂ ಜತೆಗೂಡಿಸುವುದು ಸಂಘದ ಮೂಲ ಉದ್ದೇಶ. ಆದ್ದರಿಂದಲೇ ಸಂಘವು ರಾಜಕಾರಣದಿಂದ ದೂರ ಉಳಿದಿದೆ. ಭವಿಷ್ಯದಲ್ಲೂ ಚುನಾವಣಾ ರಾಜಕಾರಣದಿಂದ ದೂರ ಉಳಿಯಲಿದೆ. ಆದರೆ ಆರೆಸ್ಸೆಸ್ ತನ್ನ ಸ್ವಯಂ ಸೇವಕರಿಗೆ ಯಾವುದೇ ಒಂದು ಪಕ್ಷದ ಪರ ಪ್ರಚಾರ ಮಾಡುವಂತೆ ಹೇಳಿಲ್ಲ. ರಾಷ್ಟ್ರದ ಹಿತಾಸಕ್ತಿಯನ್ನು ಚಿಂತಿಸುವ ಪಕ್ಷ ಗಳನ್ನು ಮಾತ್ರಬೆಂಬಲಿಸುವಂತೆ ಸಲಹೆ ಮಾಡುತ್ತದೆ ಎಂದು ಇದೇ ವೇಳೆ ಭಾಗವತ್ ಸ್ಪಷ್ಟಪಡಿಸಿದರು