ಮಂಗಳೂರು/ಉಡುಪಿ, ಏ.21 (DaijiworldNews/MB) : ದಕ್ಷಿಣ ಕನ್ನಡ ಆರೋಗ್ಯ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಬುಧವಾರ 401 ಕೊರೊನಾ ವೈರಸ್ ಪ್ರಕರಣಗಳು ಹಾಗೂ ಉಡುಪಿಯ ಆರೋಗ್ಯ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಬುಧವಾರ 471 ಕೊರೊನಾ ಪ್ರಕರಣಗಳು ದೃಢಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ವರದಿಯಾದ 401 ಕೊರೊನಾ ವೈರಸ್ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 39,244 ಕ್ಕೆ ಏರಿವೆ. ಈ ಪೈಕಿ 2,472 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಒಟ್ಟು 6,95,994 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 6,56,750 ಮಾದರಿಗಳು ನೆಗೆಟಿವ್ ಆಗಿದೆ. ಬುಧವಾರ 200 ಜನರು ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 36,024ಕ್ಕೆ ಏರಿದೆ. ಈವರೆಗೆ ಒಟ್ಟು 745 ಸಾವುಗಳು ಸಂಭವಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 47,265 ಮಾಸ್ಕ್ ಉಲ್ಲಂಘನೆ ಪ್ರಕರಣ ವರದಿ ಮಾಡಲಾಗಿದ್ದು 49,21,730 ರೂ.ಗಳ ದಂಡವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆ
ಬುಧವಾರ ದೃಢಪಟ್ಟ 471 ಕೊರೊನಾ ಪ್ರಕರಣಗಳು ಸೇರಿದಂತೆ ಜಿಲ್ಲೆಯ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 27,483ಕ್ಕೆ ಏರಿದೆ. ಈ ಪೈಕಿ 1,084 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಉಡುಪಿ ತಾಲೂಕಿನಲ್ಲಿ 267, ಕುಂದಾಪುರದಲ್ಲಿ 154, ಕಾರ್ಕಳದಲ್ಲಿ 44 ಮಂದಿಗೆ ಹಾಗೂ ಇತರೆ ಜಿಲ್ಲೆಯ 6 ಮಂದಿಗೆ ಕೊರೊನಾ ದೃಢಪಟ್ಟಿದೆ.
ಈವರೆಗೆ 4,75,645 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಬುಧವಾರ 128 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 26,205 ಕ್ಕೆ ಏರಿದೆ. ಈವರೆಗೆ ಒಟ್ಟು 194 ಸಾವುಗಳು ಸಂಭವಿಸಿವೆ.
ಇನ್ನು ಈವರೆಗೆ 1,71,936 ಮಂದಿ ಮೊದಲ ಡೋಸ್ ಕೊರೊನಾ ಲಸಿಕೆ ಹಾಗೂ 32,606ಮಂದಿ ಎರಡನೇ ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.