ಮಂಗಳೂರು, ಏ.21 (DaijiworldNews/MB) : ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು, ಸಿ.ಆರ್.ಪಿ.ಸಿ. ಕಾಯ್ದೆ 144 ರನ್ವಯ ಇಂದಿನಿಂದ ಮೇ 4 ರವರೆಗೆ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ನಿಷೇಧಾಜ್ಞೆಯನ್ನು ಹಾಗೂ ಪ್ರತಿ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ವೀಕೆಂಡ್ ಕರ್ಫ್ಯೂವನ್ನು ಜಾರಿಗೊಳಿಸಿದ್ದಾರೆ.
ನೈಟ್ ಕರ್ಫ್ಯೂ ಸಂದರ್ಭ ಏನಿರುತ್ತೆ, ಏನಿರಲ್ಲ?
ಅಗತ್ಯ ಸೇವೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಸಾರ್ವಜನಿಕ ಸಂಚಾರ/ವಾಹನ ಸಂಚಾರ ನಿಷೇಧ
ವೈದ್ಯಕೀಯ ಸೇವೆಗಳಿಗಾಗಿ ಸಂಚಾರಕ್ಕೆ ಮಾತ್ರ ಅನುಮತಿ, ವಾಣಿಜ್ಯ ಚಟುವಟಿಕೆ ನಿರ್ಬಂಧ
ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಂಸ್ಥೆಯ ಐಡಿ ಕಾರ್ಡ್ ತೋರಿಸಿ ಸಂಚಾರಕ್ಕೆ ಅನುಮತಿ
ಅತ್ಯವಶ್ಯಕ ಸೇವೆಗಳ ವಾಹನ, ಸರಕು ಸಾಗಾಣಿಕೆ, ಹೋಮ್ ಡೆಲವರಿ ವಾಹನಗಳಿಗೆ ಸಂಚಾರಕ್ಕೆ ಅನುಮತಿ
ರೈಲು, ವಿಮಾನ ಸಂಚಾರ ಮಾಡುವವರು ಮನೆಯಿಂದ ನಿಲ್ದಾಣಕ್ಕೆ, ನಿಲ್ದಾಣದಿಂದ ಮನೆಗೆ ಅಧಿಕೃತ ಟಿಕೆಟ್ ತೋರಿಸಿ ಸಂಚರಿಸಲು ಅನುಮತಿ
ವೀಕೆಂಡ್ ಕರ್ಫ್ಯೂ ಸಂದರ್ಭ ಏನಿರುತ್ತೆ, ಏನಿರಲ್ಲ?
ಕೊರೊನಾ ವಾರಿಯರ್ಸ್ಗೆ ಸಂಚಾರಕ್ಕೆ ಅನುಮತಿ
ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಂಸ್ಥೆಯ ಐಡಿ ಕಾರ್ಡ್ ತೋರಿಸಿ ಸಂಚಾರಕ್ಕೆ ಅನುಮತಿ
ವೈದ್ಯಕೀಯ ಸೇವೆಗಳಿಗಾಗಿ ಸಂಚಾರಕ್ಕೆ ಮಾತ್ರ ಅನುಮತಿ
ಅತ್ಯವಶ್ಯಕ ಸೇವೆಗಳ ವಾಹನ, ಸರಕು ಸಾಗಾಣಿಕೆ, ಹೋಮ್ ಡೆಲವರಿ ವಾಹನಗಳಿಗೆ ಸಂಚಾರಕ್ಕೆ ಅನುಮತಿ
ಮದುವೆಗೆ ಗರಿಷ್ಠ 50 ಮಂದಿ, ಅಂತ್ಯಕ್ರಿಯೆಗೆ ಗರಿಷ್ಠ 20 ಮಂದಿಗೆ ಅವಕಾಶ
ಎಲ್ಲಾ ಥಿಯೇಟರ್, ಶಾಪಿಂಗ್ ಮಾಲ್, ಜಿಮ್ಸೆಂಟರ್, ಸ್ಪೋಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಎಂಟರ್ಟೈನ್ಮೆಂಟ್, ಪಾರ್ಕ್, ಬಾರ್ ಆಂಡ್ ರೆಸ್ಟೋರೆಂಟ್ ಇತ್ಯಾದಿಗಳು ನಿಷೇಧ
ಸಾರ್ವಜನಿಕ ಸಭೆ ಸೇರುವುದು ನಿಷೇಧ
ಎಲ್ಲಾ ಸಾಮಾಜಿಕ, ರಾಜಕೀಯ, ಮನೋರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ, ಗುಂಪು ಸೇರುವುದು ನಿಷೇಧ
ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಸಾರ್ವಜನರಿಕರಿಗೆ ಪ್ರವೇಶ ನಿಷೇಧ
ಸಾರ್ವಜನಿಕರು ಸೇರಲು ಅವಕಾಶ ನೀಡದೆ ಪೂಜಾ ಕಾರ್ಯ ನಡೆಸಲು ಅವಕಾಶ