ಕಾಸರಗೋಡು, ಏ. 20 (DaijiworldNews/HR): ಜಿಲ್ಲೆಯಲ್ಲಿ ಮಂಗಳವಾರ 861 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಅತೀ ಹೆಚ್ಚು ಕೊರೊನಾ ಪ್ರಕರಣ ಇದಾಗಿದ್ದು, 815 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.
ಜಿಲ್ಲೆಯಲ್ಲಿ 180 ಮಂದಿ ಗುಣಮುಖರಾಗಿದ್ದು, 5,235 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, 9993 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ 38, 909 ಮಂದಿಗೆ ಇದುವರೆಗೆ ಸೋಂಕು ತಗಲಿದ್ದು , 33,332 ಮಂದಿ ಗುಣಮುಖರಾಗಿದ್ದಾರೆ.