ಬೆಂಗಳೂರು,ಸೆ 18 (MSP): ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಫುಡ್ ಪಾಯಿಸ್ ನಿಂದ ಬಳಲುತ್ತಿದ್ದು, ಮೂವರು ವೈದ್ಯರ ತಂಡ ಚಿಕಿತ್ಸೆ ನೀಡಿದ್ದಾರೆ. ಕಲಬುರ್ಗಿಯಲ್ಲಿ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಡಿ.ಕೆ.ಶಿ ಇಂದು ಹೈದರಬಾದ್ ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಿದ್ದರು. ವಿಮಾನವೇರುವ ಮುಂಚೆ ಉಪಹಾರ ಸೇವಿಸಿದ ಅವರು, ಬಳಿಕ ಪ್ಲೈಟ್ ನಲ್ಲಿ ನೀಡಿದ ಸ್ಯಾಂಡ್ ವಿಚ್ ಸೇವಿಸಿದ್ದಾರೆ. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ವಾಂತಿ ಮಾಡಿಕೊಂಡಿದ್ದಾರೆ.
ಬೆಂಗಳೂರು ತಲುಪಿದ ಬಳಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಕನಕಪುರದ ಕಡೆಗೆ ತೆರಳಿದ್ದು ಈ ಸಂದರ್ಭ ದಾರಿಯುದ್ದಕ್ಕೂ ವಾಂತಿ ಮಾಡಲಾರಂಭಿಸಿದ್ದಾರೆ. ಇದರಿಂದ ಸಚಿವ ಡಿ.ಕೆ ಶಿವಕುಮಾರ್ ತೀವ್ರ ಅಸ್ವಸ್ಥರಾಗಿದ್ದು, ದಾರಿ ಮದ್ಯ ಕಗ್ಗಲೀಪುರದಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅನಾರೋಗ್ಯದ ಕಾರಣ ಕನಕಪುರದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸದೇ ನೇರವಾಗಿ ಕನಕಪುರದಲ್ಲಿರುವ ತಮ್ಮ ನಿವಾಸದತ್ತ ತೆರಳಿದ್ದಾರೆ. ಬಳಿಕ ಮೂವರು ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ವೈದ್ಯರು, ಸಚಿವ ಡಿ.ಕೆ ಶಿ ಅವರಿಗೆ 3 ಬಾಟಲ್ ಗ್ಲುಕೋಸ್ ನೀಡಲಾಗಿದ್ದು, ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ತಿಳಿಸಿದ್ದಾರೆ.ತಂದೆಯ ಅನಾರೋಗ್ಯ ವಿಷಯ ತಿಳಿದು ಡಿಕೆಶಿ ಅವರ ಪುತ್ರಿ ಆಗಮಿಸಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ.