ಕಾಸರಗೋಡು, ಏ. 19 (DaijiworldNews/HR): ಜಿಲ್ಲೆಯಲ್ಲಿ ಸೋಮವಾರ 676 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 184 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಆರು ಮಂದಿ ಆರೋಗ್ಯ ಸಿಬಂದಿಗಳಿಗೂ ಸೋಂಕು ದ್ರಢಪಟ್ಟಿದ್ದು, 4, 554 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 9, 739 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 38, 724 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 33, 152 ಮಂದಿ ಗುಣಮುಖರಾಗಿದ್ದಾರೆ.