Karavali
ಕಾಸರಗೋಡು: 'ಕೊರೊನಾ ಪ್ರತಿರೋಧ ಚಟುವಟಿಕೆಗಳೊಂದಿಗೆ ಸಾರ್ವಜನಿಕರು ಸಹಕರಿಸಿ' - ಜಿಲ್ಲಾಧಿಕಾರಿ ಮನವಿ
- Mon, Apr 19 2021 05:53:34 PM
-
ಕಾಸರಗೋಡು, ಏ.19 (DaijiworldNews/MB) : ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ಅತಿ ತೀವ್ರವಾಗಿದ್ದು, ಪ್ರತಿರೋಧ ಚಟುವಟಿಕೆಗಳೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿದ್ದಾರೆ.
ಏ.13ರಿಂದ 18 ವರೆಗೆ ಜಿಲ್ಲೆಯಲ್ಲಿ ನಡೆಸಿದ ಆರ್.ಟಿ.ಪಿ.ಸಿ. ಆರ್. ತಪಾಸಣೆಗಳಲ್ಲಿ ರೋಗ ಹರಡುವಿಕೆಯ ತೀವ್ರತೆ ಅಧಿಕವಾಗಿರುವುದು (ಶೇ 14.9) ಪತ್ತೆಯಾಗಿದೆ ಎಂದವರು ನುಡಿದರು. ಇದೇ ಸ್ಥಿತಿ ಮುಂದುವರಿದಲ್ಲಿ ರೋಗಿಗಳ ಶುಶ್ರೂಷೆಗೆ ಸೌಲಭ್ಯಗಳು ಸಾಲದೇ ಹೋಗುವ ಭೀತಿಯಿದೆ. ಜಿಲ್ಲಾಡಳಿತ ಏರ್ಪಡಿಸಿರುವ ಸೌಲಭ್ಯಗಳನ್ನು ಅಳವಡಿಸಿ ಕೊರೊನಾ ಪ್ರತಿರೋಧ ಚಟುವಟಿಕೆಗಳೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಅವರು ವಿನಂತಿಸಿದರು.
ಪ್ರತಿರೋಧ ಚಟುವಟಕೆಗಳ ಅಂಗವಾಗಿ ಜಿಲ್ಲೆಯ ಪೇಟೆಗಳಲ್ಲಿ ಅನುಷ್ಠಾನಗೊಳಿಸಲಾಗುವ ತಪಾಸಣೆ ಜಿಲ್ಲೆಯ ಮೂಲಕ ಸಾಗುವ ವಾಹನಗಳಿಗೋ ವ್ಯಕ್ತಿಗಳಿಗೋ ಅನ್ವಯವಾಗುವುದಿಲ್ಲ. ಯಾವುದೇ ರೀತಿಯ ಸಂಚಾರಕ್ಕೆ ಅಡ್ಡಿ ಮಾಡುವುದಿಲ್ಲ. ಆದರೆ ಪೇಟೆಗಳನ್ನು ಕೇಂದ್ರೀಕರಿಸಿ, ಅಧಿಕ ಅವಧಿಯಲ್ಲಿ ನಡೆಸುವ ಶಾಪಿಂಗ್, ವ್ಯಾಪಾರ, ಸಮಾರಂಭಗಳಲ್ಲಿ ಭಾಗವಹಿಸುವಿಕೆ ಇತ್ಯಾದಿಗಳಿಗೆ ಈ ತಪಾಸಣೆ ಅನ್ವಯವಾಗಲಿದೆ ಎಂದವರು ಸ್ಪಷ್ಟಪಡಿಸಿದರು. ಈ ಸಂಬಂಧ ಕ್ರಮಗಳನ್ನು ಕೈಗೊಳ್ಳುವ ವೇಳೆ ವ್ಯಕ್ತಿಗಳ ಸಂಚಾರ ಸ್ವಾತಂತ್ರ್ಯಕ್ಕೆ ತೊಡಕಾಗದಂತೆ ಚಟುವಟಿಕೆಗಳನ್ನು ಏಕೀಕರಣ ನಡೆಸುವಂತೆ ಪೊಲೀಸರಿಗೆ ಪ್ರತ್ಯೇಕ ಆದೇಶ ನೀಡಲಾಗಿದೆ.
ಸಾರ್ವಜನಿಕರೊಂದಿಗೆ ಸತತವಾಗಿ ಸಂಪರ್ಕದಲ್ಲಿರುವ ವ್ಯಕ್ತಿಗಳು, ವ್ಯಾಪಾರಿಗಳು, ವ್ಯಾಪಾರ ಸಂಸ್ಥೆಗಳ ಸಿಬ್ಬಂದಿ, ಆಟೋ-ಟ್ಯಾಕ್ಸಿ ಚಾಲಕರು, ಖಾಸಗಿ-ಸರಕಾರಿ ಬಸ್ಗಳ ಸಿಬ್ಬಂದಿ ಮೊದಲಾದವರು 14 ದಿನಗಳಿಗೊಮ್ಮೆ ಉಚಿತ ಕೊರೊನಾ ತಪಾಸಣೆಗೆ ಒಳಗಾಗಬೇಕು. 45 ವರ್ಷ ಕ್ಕಿಂತ ಅಧಿಕ ವಯೋಮಾನದ ಎರಡು ಡೋಸ್ ವಾಕ್ಸಿನೇಷನ್ ಸ್ವೀಕಾರ ಮಾಡಿರುವವರು, ಸದ್ಯ ಕೊರೊನಾ ತಪಾಸಣೆಗೊಳಗಾಗಬೇಕಿಲ್ಲ. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಪಾಲಿಸಬೇಕು. 45 ವರ್ಷಕ್ಕಿಂತ ಕಡಿಮೆ ವಯೋಮಾನದ ಮಂದಿ ವಾಕ್ಸಿನೇಷನ್ ಸ್ವೀಕಾರ ನಡೆಸುವಂತೆ ಸಮಾಜ ಒತ್ತಾಯಿಸಬೇಕು. ಯುವಜನತೆಯಲ್ಲೂ ಕೊರೊನಾ ಸಂಬಂಧ ಮರಣ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಇದರ ಅನಿವಾರ್ಯತೆಯನ್ನು ತಿಳಿಸುತ್ತದೆ. ಈ ಸಂಬಂಧ ಹರಡಲಾಗುತ್ತಿರುವ ತಪ್ಪು ಸಂದೆಶಗಳನ್ನು ಯಾರೂ ನಂಬಕೂಡದು ಎಂದವರು ನುಡಿದರು.
ತೀವ್ರತರ ಸೋಂಕು ಹರಡುವಿಕೆಯ ನಿಯಂತ್ರಣ ನಿಟ್ಟಿನಲ್ಲಿ ಎಸ್.ಎಂ.ಎಸ್.(ಮಾಸ್ಕ್, ಸಾನಿಟೈಸರ್, ಸಾಮಾಜಿಕ ಅಂತರ) ಕಡ್ಡಾಯವಾಗಿ ಪಾಲಿಸಬೇಕು. ಇದರ ಅಂಗವಾಗಿ ತಪಾಸಣೆ ಚುರುಕುಗೊಳಿಸಲು ಜಿಲ್ಲಾ ಪೊಲೀಸರಿಗೆ ಆದೇಶ ನೀಡಲಾಗಿದೆ. ಇದರಂತೆಯೇ ಮಹತ್ವಿಕೆಯೊಂದಿಗೆ 45 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿಗೆ ವಾಕ್ಸಿನೇಷನ್ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಸೌಲಭ್ಯ ಏರ್ಪಡಿಸಿದೆ. ಎಲ್ಲ ಜನತೆಗೆ ವಾಕ್ಸಿನೇಷನ್ ನೀಡಿಕೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಈಗ ಮಕ್ಕಳ ಸಹಿತ 45 ವರ್ಷಕ್ಕಿಂತ ಕಡಿಮೆ ವಯೋಮಾನದ ಮಂದಿಗಾಗಿ ಸಾಮೂಹಿಕ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜನನಿಭಿಡತೆಯಿರುವ ಪ್ರದೇಶಗಳಿಂದ ಆಗಮಿಸುವ ಮಂದಿ ಆರ್.ಟಿ.ಪಿ.ಸಿ.ಆರ್ ತಪಾಸಣೆಗೆ ಒಳಗಾಗಬೇಕು. ಜನ ಗುಂಪುಗೂಡುವ ಸಾಧ್ಯತೆಯ ಪ್ರದೇಶಗಳಲ್ಲಿ ರೋಗ ಹರಡುವಿಕೆಯ ಭೀತಿಯೂ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಪೇಟೆಗಳಲ್ಲಿ ಕಟ್ಟುನಿಟ್ಟು ಏರ್ಪಡಿಸಲು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ ತೀರ್ಮಾನಿಸಿದೆ. ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ, ಜೊತೆಗೆ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ವಾಕ್ಸಿನೇಷನ್ ಮತ್ತು ಆರ್.ಟಿ.ಪಿ.ಸಿ.ಆರ್. ತಪಾಸಣೆ ನಡೆಸಬಹುದಾಗಿದೆ.
ಕೊರೊನಾ 19 ವಾಕ್ಸಿನೇಷನ್ ಕೇಂದ್ರಗಳು-ಸರಕಾರಿ ಸಂಸ್ಥೆಗಳು
1. ಆರಿಕ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ
2. ಅಡೂರು ಕುಟುಂಬ ಆರೋಗ್ಯ ಕೇಂದ್ರ
3. ಅಜಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ
4. ಆನಂದಾಶ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ
5. ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ
6. ಬಂದಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ
7. ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರ
8. ಬೇಡಡ್ಕ ತಾಲೂಕು ಆಸ್ಪತ್ರೆ
9. ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರ
10. ಚಟ್ಟಂಚಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ
11. ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರ
12. ಚೆರುವತ್ತೂರು ಸಮುದಾಯ ಆರೋಗ್ಯ ಕೇಂದ್ರ
13. ಚಿತ್ತಾರಿಕಲ್ಲ್ ಪ್ರಾಥಮಿಕ ಆರೋಗ್ಯ ಕೇಂದ್ರ
14. ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರ
15. ಕಾಞಂಗಾಡು ಜಿಲ್ಲಾ ಆಸ್ಪತ್ರೆ
16. ಕರಿಂದಳಂ ಕುಟುಂಬ ಆರೋಗ್ಯ ಕೇಂದ್ರ
17. ಕಾಸರಗೋಡು ಜನರಲ್ ಆಸ್ಪತ್ರೆ
18. ಕೊನ್ನಕ್ಕಾಡ್ ಪ್ರಾಥಮಿಕ ಆರೋಗ್ಯ ಕೇಂದ್ರ
19. ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರ
20. ಕುಂಬಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ
21. ಕುಂಬಳೆ ಕುಟುಂಬ ಆರೋಗ್ಯ ಕೇಂದ್ರ
22. ಮಧೂರು ಪ್ರಾಥಮಿಕ ಆರೋಗ್ಯ ಕೇಂದ್ರ
23. ಮಡಿಕೈ ಪ್ರಾಥಮಿಕ ಆರೋಗ್ಯ ಕೇಂದ್ರ
24. ಮಂಗಲ್ಪಾಡಿ ತಾಲೂಕು ಆಸ್ಪತ್ರೆ
25. ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ
26. ಮೀಂಜ ಪ್ರಾಥಮಿಕ ಆರೋಗ್ಯ ಕೇಂದ್ರ
27. ಮೊಗ್ರಾಲ್ ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ
28. ಮೌಕೋಡ್ ಕುಟುಂಬ ಆರೋಗ್ಯ ಕೇಂದ್ರ
29. ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರ
30. ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರ
31. ನರ್ಕಿಲಕ್ಕಾಡ್ ಪ್ರಾಥಮಿಕ ಆರೋಗ್ಯ ಕೇಂದ್ರ
32. ನೀಲೇಶ್ವರ ತಾಲೂಕು ಆಸ್ಪತ್ರೆ
33. ಓಲಾಟ್ಟ್ ಪ್ರಾಥಮಿಕ ಆರೋಗ್ಯ ಕೇಂದ್ರ
34. ಪಡನ್ನೆ ಪ್ರಾಥಮಿಕ ಆರೋಗ್ಯ ಕೇಂದ್ರ
35. ಪನತ್ತಡಿ ತಾಲೂಕು ಆಸ್ಪತ್ರೆ
36. ಪಳ್ಳಿಕ್ಕರೆ ಪ್ರಾಥಮಿಕ ಆರೋಗ್ಯ ಕೇಂದ್ರ
37. ಪಾಣತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ
38. ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ
39. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರ
40. ಪುತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ
41. ತೈಕಡಪ್ಪುರಂ ಕುಟುಂಬ ಆರೋಗ್ಯ ಕೇಂದ್ರ
42. ತ್ರಿಕರಿಪುರ ತಾಲೂಕು ಆಸ್ಪತ್ರೆ
43. ಉದುಮಾ ಕುಟುಂಬ ಆರೋಗ್ಯ ಕೇಂದ್ರ
44. ಉಡುಂಬುಂತಲ ಪ್ರಾಥಮಿಕ ಆರೋಗ್ಯ ಕೇಂದ್ರ
45. ವಲಿಯಪರಂಬ ಪ್ರಾಥಮಿಕ ಆರೋಗ್ಯ ಕೇಂದ್ರ
46. ವೆಳ್ಳರಿಕುಂಡ್ ಪ್ರಾಥಮಿಕ ಆರೋಗ್ಯ ಕೇಂದ್ರ
47. ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರಖಾಸಗಿ ಆಸ್ಪತ್ರೆಗಳು
1. ಮಾವುಂಗಾಲ್ ಸನ್ ರೈಸ್ ಆಸ್ಪತ್ರೆ
2. ನಾಯನ್ಮಾರುಮೂಲೆ ಇ.ಕೆ.ನಾಯನಾರ್ ಆಸ್ಪತ್ರೆ
3. ಚೆರುವತ್ತೂರು ಕೆ.ಎ.ಎಚ್.ಎಂ.ಆಸ್ಪತ್ರೆ
4. ಕಾಸರಗೋಡು ಕೇರ್ ವೆಲ್ ಆಸ್ಪತ್ರೆ.
5. ಕಾಸರಗೋಡು ಜನಾರ್ದನ ಆಸ್ಪತ್ರೆ
6. ಕುಂಬಳೆ ಸಹಕಾರಿ ಆಸ್ಪತ್ರೆ
7. ಕಾಸರಗೋಡು ಯುನೈಟೆಡ್ ಮೆಡಿಕಲ್ ಸೆಂಟರ್
8. ಕಿಂಸ್ ಕಾಸರಗೋಡು
9. ಕಾಸರಗೋಡು ಮಾಲೀಕ್ ದೀನಾರ್ ಆಸ್ಪತ್ರೆ
10. ಚೆರುವತ್ತೂರು ಸಹಕಾರಿ ಹೆಲ್ತ್ ಕೇರ್ ಆಸ್ಪತ್ರೆ.ಜಿಲ್ಲೆಯ ಟೆಸ್ಟಿಂಗ್ ಕೇಂದ್ರಗಳು
ಆರ್.ಟಿ.ಪಿ.ಸಿ.ಆರ್/ ಆಂಟಿಜೆನ್ ಟೆಸ್ಟ್
1. ಕಾಸರಗೋಡು ಜನರಲ್ ಆಸ್ಪತ್ರೆ
2. ಕಾಞಂಗಾಡ್ ಜಿಲ್ಲಾ ಆಸ್ಪತ್ರೆ
3. ಬೇಡಡ್ಕ ತಾಲೂಕು ಆಸ್ಪತ್ರೆ
4. ಮಂಗಲ್ಪಾಡಿ ತಾಲೂಕು ಆಸ್ಪತ್ರೆ
5. ಪೂಡಂಗಲ್ಲ್ ತಾಲೂಕು ಆಸ್ಪತ್ರೆ
6. ನೀಲೇಶ್ವರ ತಾಲೂಕು ಆಸ್ಪತ್ರೆ
7. ತ್ರಿಕರಿಪುರ ತಾಲೂಕು ಆಸ್ಪತ್ರೆ
8. ಪೆರಿಯ ಸಮುದಾಯ ಆರೋಗ್ಯ ಕೇಂದ್ರ
9. ಚೆರುವತ್ತೂರು ಸಮುದಾಯ ಆರೋಗ್ಯ ಕೇಂದ್ರ
10. ಉದುಮಾ ಕುಟುಂಬ ಆರೋಗ್ಯ ಕೇಂದ್ರ
11. ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರ
12. ಕುಂಬಳೆ ಕುಟುಂಬ ಆರೋಗ್ಯ ಕೇಂದ್ರ
13. ಚಿತ್ತಾರಿಕಲ್ಲ್ ಕುಟುಂಬ ಆರೋಗ್ಯ ಕೇಂದ್ರ
14. ಓಲಾಟ್ಟ್ ಕುಟುಂಬ ಆರೋಗ್ಯ ಕೇಂದ್ರ
15. ಪಡನ್ನ ಕುಟುಂಬ ಆರೋಗ್ಯ ಕೇಂದ್ರ
16. ಚೆಂಗಳ ಕುಟುಂಬ ಆರೋಗ್ಯ ಕೇಂದ್ರ
17. ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರ
18. ಅಜಾನೂರು ಕುಟುಂಬ ಆರೋಗ್ಯ ಕೇಂದ್ರ
19. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ
20. ವೆಳ್ಳರಿಕುಂಡ್ ಕುಟುಂಬ ಆರೋಗ್ಯ ಕೇಂದ್ರ
21. ವಲಿಯಪರಂಬ ಕುಟುಂಬ ಆರೋಗ್ಯ ಕೇಂದ್ರ
ಇವಲ್ಲದೆ ಗ್ರಾಮ ಪಂಚಾಯತ್ ಗಳು, ನಗರಸಭೆಗಳು ಬಯಸಿದಲ್ಲಿ ವಿಶೇಷ ಶಿಬಿರಗಳನ್ನು ನಡೆಸಲು ಜಿಲ್ಲಾ ವೈದ್ಯಾಧಿಕಾರಿಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.