ಮಂಗಳೂರು, ಸೆ 18 (MSP): "ಅಧುನಿಕ ವೈದ್ಯಕೀಯ ವಿಜ್ಞಾನದ ಪ್ಲಾಸ್ಟಿಕ್ ಸರ್ಜರಿಯ ಪರಿಕಲ್ಪನೆ ಹುಟ್ಟಿದ್ದು ಭಾರತೀಯ ಪುರಾಣಗಳಿಂದ. ಮೊದಲ ಬಾರಿಗೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿದ್ದು ಕೈಲಾಸದ ಅಧಿಪತಿ ಮಹದೇವ" ಹೀಗೆಂದು ಹೇಳಿದ್ದು ಸಂಸದ ನಳಿನ್ ಕುಮಾರ್ ಕಟೀಲ್.
ಸೆ.17 ರ ಸೋಮವಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ , ದ.ಕ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ ಇದರ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್, ಈ ಅಭಿಪ್ರಾಯ ಮಂಡಿಸಿದರು. ಪಾರ್ವತಿಯನ್ನು ಸ್ನಾನಕ್ಕೆ ತೆರಳುವಾಗ ಮಗನನ್ನು ಸೃಷ್ಟಿಸಿ ದ್ವಾರ ಪಾಲಕನಾಗಿರುವಂತೆ ಪಾರ್ವತಿ ಆದೇಶಿಸಿದ ಕಥೆ ಹೇಳಿದ ಸಂಸದರು, ಕೊನೆಗೆ ಮಗ ವಿನಾಯಕ, ಶಿವನ ಕೋಪಕ್ಕೆ ಒಳಗಾಗಿ ಶಿರಚ್ಚೇಧನ ಮಾಡುವ ಪ್ರಸಂಗ ಒದಗುತ್ತದೆ, ಕೊನೆಗೆ ಪಾರ್ವತಿಯ ಅದೇಶದಂತೆ ವಿನಾಯಕನಿಗೆ ಮರುಜೀವ ನೀಡಲು ಮುಂದಾಗುತ್ತಾನೆ. ಆನೆಯ ಶಿರ ವಿನಾಯಕನಿಗೆ ಜೋಡಿಸಿ ಗಜಮುಖನಿಗೆ ಮರುಜೀವ ನೀಡಿದ ಶಿವ, ಗಣಪತಿಯನ್ನು ಮತ್ತೊಮ್ಮೆ ಸೃಷ್ಟಿಸಿದ್ದು ಪ್ಲಾಸ್ಟಿಕ್ ಸರ್ಜರಿ ಮೂಲಕ ಎಂದರು.
ಈ ಸಂದರ್ಭ ಮಂಗಳೂರು ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು , ಶಾಸಕ ವೈ ಭರತ್ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ , ಬೈಜಾಡಿ ಜನಾರ್ದನ ಆಚಾರ , ಕೇಶವ ಆಚಾರ್ಯ ಉಪಸ್ಥಿತರಿದ್ದರು.