ಉಡುಪಿ, ಅ 5 : ಉಡುಪಿಯಲ್ಲಿ ನವೆಂಬರ್ 24 ರಿಂದ26 ರ ವೆರೆಗೆ ನಡೆಯುವ ಧರ್ಮ ಸಂಸದ್ನ ಪೂರ್ವಭಾವಿಯಾಗಿ ಇಂದು ಧರ್ಮ ಸಂಸದ್ನ ವೆಬ್ ಸೈಟ್ ಲೋಕಾರ್ಪಣೆಗೊಂಡಿದೆ. ಕರಾವಳಿ ಸಮೂಹ ಸಂಸ್ಥೆಯ ಅದ್ಯಕ್ಷರಾದ ಗಣೇಶ್ ರಾವ್ ಅವರು ಧರ್ಮ ಸಂಸದ್ನ ವೆಬ್ಸೈಟ್ಯನ್ನು ಲೋಕಾರ್ಪಣೆಗೊಳಿಸಿದ್ರು.ಬಳಿಕ ಮಾತನಾಡಿದ ಅವರು ಉಡುಪಿಯಲ್ಲಿ ನಡೆಯುವ ಧರ್ಮ ಸಂಸದ್ ಸಭೆಯಲ್ಲಿ ಆಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ವಿಚಾರದ ಬಗ್ಗೆ ನಿರ್ಣಯ ಆಗಬೇಕು ಎಂಬುವುದು ನಮ್ಮೆಲ್ಲಾರ ಆಶಯ. ಉಡುಪಿಯಲ್ಲಿ ಧರ್ಮ ಸಂಸದ್ ನಡೆಯುತ್ತಿರುವುದು ನಿಜಕ್ಕೂ ನಮ್ಮೆಲ್ಲರ ಭಾಗ್ಯ. ಉಡುಪಿಯ ಪ್ರತಿಯೊಬ್ಬ ನಾಗರೀಕನ ಪ್ರೋತ್ಸಾಹ ಅತೀ ಅಗತ್ಯ. ಈ ಮೂಲಕ ಭಾರತದಲ್ಲಿ ಭವ್ಯ ಹಿಂದೂ ಸಮಾಜವನ್ನು ಕಟ್ಟಲು ಹಿಂದುಗಳು ಮುಂದಡಿಯಿಡಬೇಕು ಎಂದರು.
ಆ ಬಳಿಕ ಮಾತನಾಡಿದ ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರದ್ಲಾಂಜೆ , ಇತ್ತೀಚಿನ ದಿನಗಳಲ್ಲಿ ಕರಾವಳಿ ತೀರದಲ್ಲಿ ನಡೆಯುತ್ತಿರುವ ರಾಕ್ಷಸ ಪ್ರವೃತ್ತಿಯ ಚಟುವಟಿಕೆಗಳನ್ನು ಹತ್ತಿಕ್ಕುವ ಕೆಲಸ ಧರ್ಮ ಸಂಸದ್ನ ಮೂಲಕ ನಡೆಯಬೇಕಾಗಿದೆ. ಲವ್ ಜಿಹಾದ್, ಹೆಸರಿನಲ್ಲಿ ಹಿಂದೂ ಧರ್ಮದ ಹುಡುಗಿಯರನ್ನು ಮತಾಂತರ ಮಾಡಿಸುವ ದುಷ್ಟ ಶಕ್ತಿಗಳಿಗೆ ದಿಟ್ಟ ಉತ್ತರ ನೀಡುವ ಕೆಲಸ ಧರ್ಮಸಂಸದ್ನ ಮೂಲಕ ಆಗಬೇಕು. ಕರಾವಳಿ ಹಿಂದೂಗಳ ಮೇಲೆ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಿಗೆ ತಡೆ ಒಡ್ಡಿ ಹಿಂದೂಗಳು ನಾವೆಲ್ಲಾರೂ ಒಂದು ಎಂಬ ಸಂದೇಶವನ್ನು ಈ ಧರ್ಮಸಂಸದ್ನ ಮೂಲಕ ಭಯೋತ್ಪಾದಕ ಚಟುವಟಿಕೆಯ ನಡೆಸುವ ಶಕ್ತಿಗಳಿಗೆ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ- ಕೋಟ ಶ್ರೀನಿವಾಸ ಪೂಜಾರಿ, ವಿಶ್ವಹಿಂದೂ ಪರಿಷತ್ ಮುಖಂಡ ಎಮ್ ವಿ ಪುರಾಣಿಕ್, ವಿಶ್ವ ಹಿಂದೂ ಪರಿಷತ್ತ್ ಜಿಲ್ಲಾದ್ಯಕ್ಷ- ವಿಲಾಸ್ ನಾಯ್ಕ್, ಅಚ್ಚುತ ಕಲ್ಮಾಡಿ, ಮೊದಲಾದವರು ಉಪಸ್ಥಿತರಿದ್ದರು.