ಕಾಸರಗೋಡು, ಎ.18 (DaijiworldNews/PY): ಜಿಲ್ಲೆಯಲ್ಲಿ ರವಿವಾರ 622 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈವರೆಗೆ 37,372 ಮಂದಿ ಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 162 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇಲ್ಲಿಯವರೆಗೆ 32,968 ಮಂದಿ ಗುಣಮುಖರಾಗಿದ್ದಾರೆ.
ಸಂಪರ್ಕದಿಂದ 602 ಮಂದಿಗೆ ಸೋಂಕು ತಗುಲಿದ್ದು, 6 ಮಂದಿ ಆರೋಗ್ಯ ಸಿಬ್ಬಂದಿಗಳಿಗೂ ಸೋಂಕು ಪತ್ತೆಯಾಗಿದೆ.
ಸದ್ಯ 4,064 ಮಂದಿ ಚಿಕಿತ್ಸೆಯಲ್ಲಿದ್ದು, 9,660 ಮಂದಿ ನಿಗಾದಲ್ಲಿದ್ದಾರೆ.