ಕಾಸರಗೋಡು, ಎ.18 (DaijiworldNews/PY): ಹೊರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವವರಿಗೆ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಆರ್ಟಿಪಿಸಿಆರ್ ತಪಾಸಣೆ ಅಥವಾ 14 ದಿನ ರೂಂ ಐಸೋಲೇಷನ್ ಕಡ್ಡಾಯಗೊಳಿಸಲಾಗಿದೆ.
"ಹೊರ ರಾಜ್ಯಗಳಿಂದ ಆಗಮಿಸುವವರು ಇ - ಜಾಗ್ರತಾ ಪೋರ್ಟಲ್ನಲ್ಲಿ ನೋಂದಾಯಿಸಬೇಕು . ವ್ಯಾಕ್ಸಿನ್ ಪಡೆದುಕೊಂಡವರೂ ಕೇರಳಕ್ಕೆ ಆಗಮಿಸುವ 48 ಗಂಟೆ ಮೊದಲು ಆರ್ಟಿಪಿಸಿಆರ್ ತಪಾಸಣೆ ನಡೆಸಬೇಕು. ಇಲ್ಲದಿದ್ದಲ್ಲಿ ಕೇರಳಕ್ಕೆ ಆಗಮಿಸಿದ ಕೂಡಲೇ ಆರ್ಟಿಪಿಸಿಆರ್ ತಪಾಸಣೆ ನಡೆಸಬೇಕು. ಇದಲ್ಲದೆ ಫಲಿತಾಂಶ ಲಭಿಸುವ ತನಕ ರೂಂ ಐಸೋಲೇಷನ್ನಲ್ಲಿ ಕಳೆಯಬೇಕು. ಯಾವುದಾದರೂ ರೋಗ ಲಕ್ಷಣ ಕಂಡು ಬಂದಲ್ಲಿ ವೈದ್ಯರ ಬಳಿ ತಪಾಸಣೆ ನಡೆಸಬೇಕು" ಎಂದು ರಾಜ್ಯ ಆರೋಗ್ಯ ಸಚಿವಾಲಯ ಮಾರ್ಗ ಸೂಚಿ ಹೊರಡಿಸಿದೆ.