ಬೆಂಗಳೂರು, ಸೆ 17(SM): ವಿದೇಶ ಪ್ರವಾಸದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಆಗಮಿಸಿದ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ಆಗಲಿವೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು. ಜಾರಕೀಹೊಳಿ ಸಹೋದರರು ರಾಜೀನಾಮೆ ನೀಡುತ್ತಾರೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಪಸರಿಸಿತ್ತು. ಆದರೆ, ಸಿದ್ದರಾಮಯ್ಯರನ್ನು ಭೇಟಿಯಾಗುವ ಮೂಲಕ ಆ ಎಲ್ಲಾ ಗಾಸಿಪ್ ಗಳಿಗೆ ತೆರೆ ಬಿದ್ದಿದೆ.
ಬೆಂಗಳೂರಿಗೆ ತೆರಳಿದ ಸಚಿವ ರಮೇಶ್ ಜಾರಕೀಹೊಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನನ್ನನ್ನು ಸಿದ್ದರಾಮಯ್ಯ ಕರೆದಿಲ್ಲ. ನಾವಾಗಿಯೇ ಅವರನ್ನು ಭೇಟಿ ಮಾಡಿ ಅವರಿಗೆ ಶೂಭಾಶಯ ತಿಳಿಸಲು ಬಂದಿದ್ದೇವೆ. ವಿದೇಶ ಪ್ರವಾಸ ಮುಗಿಸಿ ಬಂದ ಅವರಿಗೆ ಶುಭಾಶಯ ಹೇಳಲು ಆಗಮಿಸಿದ್ದೇವೆ ಎಂದಿದ್ದಾರೆ. ರಾಜೀನಾಮೆ ವಿಚಾರ ಪ್ರಸ್ತಾಪಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಕಾರಣಕ್ಕೆ ನಾನು ರಾಜೀನಾಮೆ ನೀಡಲಿ? ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎಂಬುವುದಾಗಿ ಕಳೆದ ನಾಲ್ಕಾರು ದಿನಗಳಿಂದ ಕ್ರಿಯೆಟ್ ಆಗಿದ್ದ ಹೈಡ್ರಾಮಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ.