ಉಡುಪಿ, ಏ.18 (DaijiworldNews/MB) : ಮನೆಯ ಮಾಡಿನ ಹಂಚನ್ನು ತೆಗೆದು ಮನೆಯ ಒಳಗೆ ನುಗ್ಗಿ 1.38 ಲಕ್ಷ ರೂ.ಗಳ 46 ಗ್ರಾಂ ಆಭರಣ ಹಾಗೂ 3 ಸಾವಿರ ನಗದನ್ನು ಕಳವು ಮಾಡಿರುವ ಘಟನೆ ಅಲೆವೂರು ಗ್ರಾಮದ ಗುಡ್ಡೆಯಂಗಡಿಯ ದೇಶಿಂಗಬೆಟ್ಟುವಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಗಣೇಶ್ ಕುಲಾಲ್ ಎಂಬವರ ಮನೆಯಲ್ಲಿ ಈ ದರೋಡೆ ನಡೆದಿದೆ. ಏಪ್ರಿಲ್ 16 ರಂದು ರಾತ್ರಿ 9 ಗಂಟೆಯ ಬಳಿಕ ಏಪ್ರಿಲ್ 17 ರಂದು ಮುಂಜಾನೆ 1.30 ರ ಸುಮಾರಿಗೆ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಮನೆಯ ಮಾಡಿನ ಹಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿದ ಕಳ್ಳರು ಕಪಾಟಿನ ಲಾಕರ್ನ್ನಲ್ಲಿಟ್ಟಿದ 46 ಗ್ರಾಂ ನ 1,38,000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3000 ನಗದನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,41,000 ಆಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/2021 ಕಲಂ :457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.