ಮಂಗಳೂರು, ಎ.18 (DaijiworldNews/PY): ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 35 ಮಂದಿ ಮಹಿಳಾ ಪೊಲೀಸರಿಗೆ ಎಪ್ರಿಲ್ 30ರ ತನಕ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಸೂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಗರ್ಭಿಣಿಯರು ಹಾಗೂ ಎರಡು ವರ್ಷದೊಳಗಿನ ಮಕ್ಕಳಿರುವ ಮಹಿಳಾ ಸಿಬ್ಬಂದಿಗಳು ಮನೆಯಲ್ಲಿಯೇ ಇದ್ದು, ಕಚೇರಿಯ ಕೆಲಸವನ್ನು ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ಗಳಲ್ಲಿ ನಿರ್ವಹಿಸಲು ಸೂಚನೆ ನೀಡಲಾಗಿದೆ' ಎಂದು ಹೇಳಿದ್ದಾರೆ.
"ಕೊರೊನಾ ಸೋಂಕು ಹಿನ್ನೆಲೆ ಸಾರ್ವಜನಿಕ ದೂರು ಸ್ವೀಕರಿಸಲು ಕಮೀಷನರೇಟ್ ವ್ಯಾಪ್ತಿಯ ಠಾಣೆಗಳ ಸಮೀಪ ಶನಿವಾರ ಪ್ರತ್ಯೇಕ ಕಿಯೋಸ್ಕ್ಗಳನ್ನು ಪ್ರಾರಂಭಿಸಲಾಗಿದೆ" ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸುಮಾರು 300ಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರತ ಪೊಲೀಸರು ಕೊರೊನಾ ಸೋಂಕಿಗೆ ಒಳಗಾಗಿದ್ದರು.