ಮಂಗಳೂರು, ಏ. 18 (DaijiworldNews/HR): ದುಬೈನಿಂದ ಬರುತ್ತಿದ್ದ ಓರ್ವ ಪ್ರಯಾಣಿಕನನ್ನು ಏ.18ರಂದು ಮುಂಜಾನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆತನಿಂದ 24.44 ಲಕ್ಷ ರೂ.ಗಳ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಬಂಧಿತನನ್ನು ಕಾಸರಗೋಡಿನ ಅಬೂಬಕರ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಐಎಕ್ಸ್ 384 ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದ.
ಆತನನ್ನು ಶೋಧಿಸಿದಾಗ ತಾನು ಧರಿಸಿದ್ದ ಸಾಕ್ಸ್ನಲ್ಲಿ ಚಿನ್ನವನ್ನು ಮರೆಮಾಚಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದ. ಈತನಿಂದ 24.44 ಲಕ್ಷ ಮೌಲ್ಯದ 504 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕಸ್ಟಮ್ಸ್ ಕಮಿಷನರ್ ಕಪಿಲ್ ಗಾಡೆ ನೇತೃತ್ವದಲ್ಲಿ ಅಧೀಕ್ಷಕರಾದ ಭೋಮ್ಕರ್, ವಿಕಾಸ್ ಮತ್ತು ಕ್ಷಿತಿ ಕಾರ್ಯಚರಣೆ ನಡೆಸಿದ್ದಾರೆ.