ಮಂಗಳೂರು, ಎ.18 (DaijiworldNews/PY): ರಂಗಭೂಮಿ ಕಲಾವಿದ, ಸಮಾಜ ಸೇವಕ ಪೀಟರ್ ಬೆನೆಡಿಕ್ಟ್ ಬೋಳಾರ್ (73) ಅವರು ಎಪ್ರಿಲ್ 18ರ ರವಿವಾರ ಮುಂಜಾನೆ 4.50ಕ್ಕೆ ನಿಧನರಾದರು.
ಪೀಟರ್ ಬೆನೆಡಿಕ್ಟ್ ಅವರು 70ರ ದಶಕದ ಕಾಲದಲ್ಲಿಯೇ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು, ತುಳು ಸೇರದಂತೆ ಕೊಂಕಣಿ ನಾಟಕಗಳಲ್ಲಿ ಚತುರ ಅಭಿನಯ ಹಾಗೂ ಮುಖವರ್ಣಿಕೆಯ ಕಲಾವಿದರಾಗಿ ಎಲ್ಲರ ಗಮನ ಸೆಳೆದಿದ್ದರು.
ದುಬೈಯಲ್ಲಿ ವೃತ್ತಿಯಲ್ಲಿದ್ದಾಗಲೂ ಇವರು ಅಲ್ಲಿಯ ನಾಟಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಪೀಟರ್ ಅವರು ಕೆ.ಎನ್.ಟೇಲರ್ ಅವರ ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಪೀಟರ್ ಅವರು ಆಗಿನ ಕಾಲದ ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು.
ಇವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.