ಕಲಬುರಗಿ, ಸೆ17(SS): ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪೆಟ್ರೋಲ್ - ಡೀಸೆಲ್ ಪ್ರತಿ ಲೀಟರ್ಗೆ 2 ರೂ. ಕಡಿಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪೆಟ್ರೋಲ್ -ಡೀಸೆಲ್ ದರದಲ್ಲಿ ಇಳಿಕೆ ಮಾಡುವ ಕುರಿತು ತಿಳಿಸಿದರು.
ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ತೀವ್ರಗತಿ ತಲುಪಿದ್ದು, ರಾಜ್ಯದಲ್ಲಿ ಪೆಟ್ರೋಲ್ ಬೆಲೆ 84.39 ರೂ. ಆಗಿತ್ತು. ಪೆಟ್ರೋಲ್ಗೆ ಈಗಾಗಲೇ ರಾಜಸ್ಥಾನದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಪಶ್ಚಿಮ ಬಂಗಾಳದಲ್ಲಿ ಒಂದು ರೂ. ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.