ಉಳ್ಳಾಲ, ಸೆ 15(SM): ಸ್ಕೂಟರ್ ಸವಾರನೋರ್ವ ಏಕಾಏಕಿ ದಿಕ್ಕು ಬದಲಾಯಿಸಿ ಚಲಿಸಿದ ಪರಿಣಾಮ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿಯ 66ರ ಜಪ್ಪಿನಮೊಗೆರುವಿನಲ್ಲಿ ನಡೆದಿದೆ. ಪಂಪ್ ವೆಲ್ ನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಸ್ಕೂಟರ್ ಸವಾರ ಹಠಾತ್ ಆಗಿ ರಸ್ತೆಯಲ್ಲಿದ್ದ ಉಬ್ಬು ತಪ್ಪಿಸುವ ಸಂದರ್ಭ ಎಡ ಕಡೆಗೆ ತಿರುಗಿದ್ದಾನೆ.
ಈ ಸಂದರ್ಭ ಹಿಂಬದಿಯಲ್ಲಿದ್ದ ಕಾರು ಚಾಲಕಿ ಹಠಾತ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ಹಿಂಬದಿಯಲ್ಲಿದ್ದ ಇನ್ನೋವಾ ಕಾರು ಕೂಡ ಡಿಕ್ಕಿ ಹೊಡೆದಿದೆ. ಇನೋವಾ ಕಾರಿನ ಹಿಂಬದಿಯಲ್ಲಿದ್ದ ಐ10 ಕಾರು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇನೋವಾ ಕಾರಿನ ಮುಂಭಾಗ ಹಾಗೂ ಹಿಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.