ಮಡಿಕೇರಿ, ಸೆ15(SS): ಹೊಡೆದವನಿಗೆ ಇನ್ನೊಂದು ಕೆನ್ನೆ ತೋರಿಸುವಂತ ವ್ಯಕ್ತಿ ನಾನಲ್ಲ. ಸಂಸದ ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ದೇವಯ್ಯನನ್ನು ಮುಟ್ಟಿ ನೋಡಲಿ ಎಂದು ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಹೇಳಿದ್ದಾರೆ.
ನಮ್ಮದೇ ಪಕ್ಷದ ಕಿರಿಯ ಸಂಸದನೊಬ್ಬ ತಪ್ಪು ಹೆಜ್ಜೆ ಇಡುತ್ತಿರುವಾಗ ಅದಕ್ಕೆ ತಿಳಿ ಹೇಳುವ ಜವಾಬ್ದಾರಿ ನನ್ನ ಮೇಲಿದೆ. ನನಗೆ 68 ವಯಸ್ಸು. ಆದರೆ ಅವನಿಗೆ 35 ವರ್ಷ. ನನ್ನ ಮಗಳ ವಯಸ್ಸಿನವನು ಪ್ರತಾಪ್ ಸಿಂಹ. ಅಂದು ಮಾತನಾಡುವಾಗ ಭಾವೋದ್ವೇಕ ಆಗಿದ್ದೆ. ಆದರೆ ಅಂದೇ ನಾನು ಅವನಲ್ಲಿ ಕ್ಷಮೆ ಕೇಳಿದ್ದೇನೆ. ಆದರೆ ಕೆನ್ನೆಗೆ ಬಾರಿಸುತ್ತೇನೆ ಎಂದು ಹೇಳುವ ಅವರ ನಾಲಗೆ ಆ ವ್ಯಕ್ತಿಯ ಕುಲವನ್ನು ಹೇಳುತ್ತದೆ ಎಂದು ತಿಳಿಸಿದರು.
ನಾನು ಹತ್ತಾರು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹತ್ತಾರು ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದೇನೆ. ಬಿಕಾರಿ ಹಾಗೆ ಮಾತನಾಡಲು ನಾನು ಹೋಗಲ್ಲ. ಕೆಲಸದಲ್ಲಿ ಅನುಭವ ಹೊಂದಿದ್ದರಿಂದ ಕೆಲವು ಸಲಹೆ ನೀಡಿದ್ದೇನೆ. ಆದರೆ ನಾನು ಪ್ರತಾಪ್ ಸಿಂಹ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ನಾನು ಊರು ಬಿಟ್ಟು ಹೋಗುವ ವ್ಯಕ್ತಿಯಲ್ಲ. ಗಾಂಧಿವಾದಿಯೂ ನಾನಲ್ಲ. ನಾನು ಸುಭಾಸ್ ಚಂದ್ರ, ಚಂದ್ರಶೇಖರ್ ಆಜಾದ್ ಅಂತಹ ನಾಯಕರ ತತ್ವಗಳನ್ನು ಅಳವಡಿಸಿಕೊಂಡಿದ್ದೇನೆ. ಹೊಡೆದವನಿಗೆ ಇನ್ನೊಂದು ಕೆನ್ನೆ ತೋರಿಸುವಂತ ವ್ಯಕ್ತಿ ನಾನಲ್ಲ. ತಾಕತ್ತಿದ್ದರೆ ಬಂದು ದೇವಯ್ಯನನ್ನು ಮುಟ್ಟಿ ನೋಡಲಿ. ಕೊಡಗಿನ ಜನ ಎಂತಹವರು ಎಂಬುದನ್ನು ತೋರಿಸುತ್ತೇವೆ ಎಂದು ಆಕ್ರೋಶಗೊಂಡರು.
ಸಂಸದ ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ನನ್ನ ಮುಂದೆ ಬರಲಿ. ಆವಾಗ ಈ ಕೊಡಗಿನ ದೇವಯ್ಯ ಯಾರೆಂದು ತೋರಿಸುತ್ತೇನೆ ಎಂದು ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಸವಾಲು ಹಾಕಿದ್ದಾರೆ.