ತಿರುವನಂತಪುರ, ಸೆ15(SS): ಜಲಂಧರ್ ಮೂಲದ ಬಿಷಪ್ ಫ್ರಾಂಕೊ ಮುಲ್ಲಾಕಲ್ ಅವರು 2014ರಿಂದ 2016ರ ಅವಧಿಯಲ್ಲಿ 13 ಬಾರಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ 44 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರು ಕೇರಳ ಪೊಲೀಸರಿಗೆ ಜೂನ್ನಲ್ಲಿ ದೂರು ನೀಡಿದ್ದರು.
ಮಾತ್ರವಲ್ಲ, ಕ್ಯಾಥೋಲಿಕ್ ಚರ್ಚ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸನ್ಯಾಸಿನಿಯರ ಗುಂಪು ಲೈಂಗಿಕ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಅತ್ಯಾಚಾರ ಆರೋಪಿ ಜಲಂಧರ್ ಬಿಷಪ್ ಫ್ರಾಂಕೊ ಮುಲ್ಲಾಕಲ್ ಅವರನ್ನು ರಕ್ಷಿಸುತ್ತಿರುವ ಚರ್ಚ್ ಪ್ರಾಧಿಕಾರ ಮತ್ತು ಪೊಲೀಸರ ವಿರುದ್ಧ ವಂಚಿ ಚೌಕದಲ್ಲಿ ಕುಳಿತು ಪ್ರತಿಭಟಿಸಿದ್ದರು. ಜೊತೆಗ ಆರೋಪಿಯ ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದರು.
ಈ ನಡುವೆ ಕೆಲ ದಿನಗಳಿಂದ ಕ್ಯಾಥೋಲಿಕ್ ಪಾದ್ರಿ, ಅತ್ಯಾಚಾರ ಆರೋಪಿ ಜಲಂಧರ್ ಬಿಷಪ್ ಫ್ರಾಂಕೊ ಮುಲ್ಲಾಕಲ್ ಪದಚ್ಯುತಿಗೆ ತೀವ್ರ ಆಗ್ರಹ ಕೇಳಿಬಂದಿತ್ತು. ಈ ಆಗ್ರಹದಂತೆ ಅತ್ಯಾಚಾರ ಪ್ರಕರಣದ ಆರೋಪಿ ಜಲಂಧರ್ ಮೂಲದ ಬಿಷಪ್ ಫ್ರಾಂಕೊ ಮುಲ್ಲಾಕಲ್ ಅವರನ್ನು ಪೀಠದಿಂದ ಕೆಳಗಿಳಿಸಲಾಗಿದೆ.