ಉಡುಪಿ, ಏ13 (DaijiworldNews/MS): ಮುಂಬಯಿ ನಲ್ಲಿ ನಡೆದ ಪ್ರತಿಷ್ಟಿತ ಮಿಸ್ ದಿವಾ ಯೂನಿವರ್ಸ್ -2020 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಕರಾವಳಿಯ ಕುವರಿ ಎಡ್ಲಿನ್ ಕ್ಯಾಸ್ತಲಿನೋ ಅವರು ಮುಂಬರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನ್ಲ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮೇಯಲ್ಲಿ ನಡೆಯಲಿರುವ ಯು ಎಸ್ ಎ ಯಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಇವರು ಮೂಲತಃ ಉಡುಪಿಯ ಉದ್ಯಾವರದ ಕೊರಂಗ್ರಪಾಡಿಯವರು.
ಪ್ರಸ್ತುತ ಕುವೈಟ್ ನ ವೈಟ್ ಸ್ಟೋರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲ್ಪೋನ್ಸಸ್ ಕ್ಯಾಸ್ತಲಿನೋ ಮತ್ತು ಕುವೈತ್ ನ ಹೆಲ್ಮನ್ ವರ್ಲ್ಡ್ ವೈಡ್ ಲಾಜಿಸ್ಟಿಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀರಾ ಕ್ಯಾಸ್ತಲಿನೋ ದಂಪತಿಯ ಪುತ್ರಿಯಾಗಿದ್ದಾರೆ.