ಮಂಗಳೂರು, ಏ. 12 (DaijiworldNews/SM): ರಂಜಾನ್ ತಿಂಗಳ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಮುಸಲ್ಮಾನ ಭಾಂದವರಿಗೆ ಮಂಗಳವಾರದಿಂದ ರಂಜಾನ್ ಉಪವಾಸ ಆರಂಭಗೊಳ್ಳಲಿದೆ.
ಚಂದ್ರದರ್ಶನವಾಗಿರುವ ಬಗ್ಗೆ ದ. ಕ. ಜಿಲ್ಲಾ ಖಾಝಿಯವರಾದ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಘೋಷಣೆ ಮಾಡಿದ್ದಾರೆ. ಇನ್ನು ಮಂಗಳವಾರದಿಂದ ಆರಂಭಗೊಂಡ ಉಪವಾಸ ಮುಂದಿನ ಒಂದು ತಿಂಗಳ ಕಾಲ ಇರಲಿದೆ. ಇನ್ನು ಈ ಸಮಯ ಮುಸಲ್ಮಾನ ಬಾಂಧವರಿಗೆ ಪವಿತ್ರವಾಗಿರುವ ಸಮಯವಾಗಿದ್ದು, ಉಪವಾಸ ಹಾಗೂ ಪ್ರಾರ್ಥನೆಗೆ ಹೆಚ್ಚಿನ ಸಮಯ ನೀಡಲಿದ್ದಾರೆ.