ಕಾಸರಗೋಡು, ಏ 12 (DaijiworldNews/MS):ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಜಿಲ್ಲೆಯ ಐದು ಕೇಂದ್ರಗಳು ಸಜ್ಜುಗೊಳಿಸಲಾಗಿದೆ.
ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಮತಗಟ್ಟೆ ಗಳನ್ನು ಸಜ್ಜುಗೊಳಿಸಲಾಗಿದ್ದು , ಕುಂಬಳೆ ಸರಕಾರಿ ಹಯರ್ ಸೆಕಂಡರಿ ಶಾಲೆ , ಕಾಸರಗೋಡು ಸರಕಾರಿ ಕಾಲೇಜು , ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು , ಪಡನ್ನಕ್ಕಾಡ್ ನೆಹರೂ ಕಾಲೇಜು , ತೃಕ್ಕರಿಪುರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಮತಗಟ್ಟೆಗಳಲ್ಲಿ ನಾಲ್ಕು ಕೌಂಟಿಂಗ್ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಏಳು ಮೇಜುಗಳನ್ನು ಮತ ಎಣಿಕೆ ಗೆ ಸಜ್ಜುಗೊಳಿಸಲಾಗಿದೆ. ಅಂಚೆ ಬ್ಯಾಲೆಟ್ ಗೆ ಪ್ರತ್ಯೇಕ ಕೌಂಟಿಂಗ್ ಹಾಲ್ ವ್ಯವಸ್ಥೆ ಮಾಡಲಾಗುವುದು .
ಮೇ ಎರಡರಂದು ಬೆಳಿಗ್ಗೆ 8 ಗಂಟೆ ಗೆ ಮತ ಎಣಿಕೆ ಆರಂಭಗೊಳ್ಳಲಿದೆ. ಮತ ಎಣಿಕೆಯ ಪೂರ್ವಭಾವಿಯಾಗಿ ಸಿಬಂದಿಗಳಿಗೆ ತರಬೇತಿ ನೀಡಲಾಗಿದೆ.