ಕಾಸರಗೋಡು, ಏ. 11 (DaijiworldNews/SM): ಜಿಲ್ಲೆಯಲ್ಲಿ ನಿರಂತರ ಎಂಬಂತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ರವಿವಾರ ಮತ್ತೆ 251 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
81 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು 2364 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. 9373 ಮಂದಿ ನಿಗಾದಲ್ಲಿದ್ದಾರೆ. 34,364 ಮಂದಿಗೆ ಇದುವರೆಗೆ ಸೋಂಕು ದೃಢಪಟ್ಟಿದ್ದು, ಇಲ್ಲಿಯ ತನಕ 31,678 ಮಂದಿ ಗುಣಮುಖರಾಗಿದ್ದಾರೆ.