ಮಂಗಳೂರು, ಸೆ 14(SM): ಯಡಿಯೂರಪ್ಪ ಅವರ ಯಾವುದೇ ಪೂಜೆಗಳ ಫಲ ಲಭಿಸುವುದಿಲ್ಲ. ಸಮ್ಮಿಶ್ರ ಸರಕಾರವನ್ನು ಉರುಳಿಸುವ ಪ್ರಯತ್ನ ಎಲ್ಲವೂ ವಿಫಲವಾಗಲಿದೆ ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ, ಮತ್ತೆ ಅಧಿಕಾರ ಪಡೆಯುವ ಆಸೆಯಲ್ಲಿ ಬಿಜೆಪಿಯಲ್ಲಿದೆ.
ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರನ್ನು ಯಾವ ರೀತಿ ತರಬೇಕು ಅನ್ನುವುದನ್ನು ಬಿಜೆಪಿಯವರ ನಡವಳಿಕೆ ನೋಡಿ ನಿರ್ಧರಿಸಲಾಗುವುದು. ರಾಜ್ಯದಲ್ಲಿ ಮುಂದಿನ ೫ ವರ್ಷಗಳ ಕಾಲ ಸಮ್ಮಿಶ್ರ ಸರಕಾರವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ಬಿಜೆಪಿ ಶಾಸಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಯಾವ ಸಂದರ್ಭದಲ್ಲಿ ಫೀಲ್ಡ್ಗೆ ಇಳಿಸಬೇಕೆಂದು ಬಿಜೆಪಿಯವರ ನಡವಳಿಕೆ ನೋಡಿ ನಿರ್ಧಾರ ಮಾಡುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಯಾರೂ ಕೂಡ ಬಿಜೆಪಿ ಸಂಪರ್ಕದಲ್ಲಿಲ್ಲ ಎಂದರು.