ಉಡುಪಿ, ಏ.10 (DaijiworldNews/MB) : ಉಡುಪಿಯಲ್ಲಿ ನೈಟ್ ಕರ್ಫ್ಯೂ ಗೆ ತಯಾರಿ ನಡೆಸಲಾಗುತ್ತಿದ್ದು ಉಡುಪಿ ನಗರಕ್ಕೆ ಎಂಟ್ರಿ ಪಾಯಿಂಟ್ನಲ್ಲಿಯೇ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ಡಯಾನ ಥಿಯೇಟರ್, ಬನ್ನಂಜೆ, ಮಣಿಪಾಲ, ಕಲ್ಸಂಕ ಸರ್ಕಲ್ ಇತರ ಕಡೆಯೂ ಪೊಲೀಸ್ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ಶನಿವಾರ ರಾತ್ರಿಯಿಂದ ಉಡುಪಿ, ಮಣಿಪಾಲದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬರಲಿದ್ದು ಬಾರ್, ಪಬ್, ಸೇರಿದಂತೆ ಎಲ್ಲಾ ವ್ಯವಹಾರ ರಾತ್ರಿ 10 ಗಂಟೆಗೆ ಮೊದಲೇ ಸ್ಥಗಿತಗೊಳ್ಳಲಿದೆ.
ಅನವಶ್ಯಕವಾಗಿ ಹೊರಗಡೆ ತಿರುಗುವುದನ್ನು ನಿಷೇಧಿಸಲಾಗಿದ್ದು ಕೇವಲ ಅಗತ್ಯ ಸೇವೆಗಳಿಗೆ ಸಂಚರಿಸಲು ಮಾತ್ರ ಅವಕಾಶ ನೀಡಲಾಗುತ್ತದೆ.