ಮುಂಬಯಿ, ಸೆ13(SS): ಮೋದಿಯಂತಹ ಅನಕ್ಷರಸ್ಥ ಮತ್ತು ಅಶಿಕ್ಷಿತ ವ್ಯಕ್ತಿಯ ಕಿರು ಚಿತ್ರವನ್ನು ನೋಡುವುದರಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪ್ರಶ್ನಿಸಿದ್ದಾರೆ.
ರಾಜ್ಯದ ಶಾಲೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಆಧರಿಸಿದ ಕಿರುಚಿತ್ರ ಪ್ರದರ್ಶಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ಮೋದಿ ಅವರನ್ನು ಓರ್ವ ಅನಕ್ಷರಸ್ಥ ಎಂದು ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು ಈ ರೀತಿಯ ಹೇಳಿಕೆ ನೀಡಿ ವಿವಾದ ಸೃಷ್ಟಿದ್ದಾರೆ. ಮೋದಿ ಅವರ ಕುರಿತಾದ ಚಿತ್ರವನ್ನು ಬಲವಂತವಾಗಿ ಪ್ರದರ್ಶಿಸುವುದು ತಪ್ಪು. ರಾಜಕೀಯ ವಿಚಾರಗಳಿಂದ ಮಕ್ಕಳನ್ನು ದೂರವೇ ಇರಿಸಬೇಕು. ಮೋದಿಯಂತಹ ಅನಕ್ಷರಸ್ಥ ಮತ್ತು ಅಶಿಕ್ಷಿತ ವ್ಯಕ್ತಿಯ ಚಿತ್ರವನ್ನು ನೋಡುವುದರಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಾತ್ರವಲ್ಲ ಪ್ರಧಾನಮಂತ್ರಿಗಳು ಎಷ್ಟು ಪದವಿಗಳನ್ನು ಹೊಂದಿದ್ದಾರೆ ಎಂದು ಮಕ್ಕಳು ಹಾಗೂ ಜನರಿಗೆ ಗೊತ್ತಿಲ್ಲ. ಅವರು ಒಬ್ಬ ಅನಕ್ಷರಸ್ಥ ಮತ್ತು ಅಶಿಕ್ಷಿತ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ.