ಸುಳ್ಯ, ಸೆ 12(SM): ತಾಲೂಕಿನ ದಬ್ಬಡ್ಕ-ಕಾಂತಬೈಲು-ಚೆಟ್ಟಿಮಾನಿ ಮೂಲಕ ಮಡಿಕೇರಿಯನ್ನು ಸಂಪರ್ಕ ಮಾಡುವ ರಸ್ತೆಯನ್ನು ದುರಸ್ತಿ ಮಾಡುವ ಕೆಲಸವನ್ನು ದಬ್ಬಡ್ಕ- ಕಾಂತಬೈಲು ಜನರು ಕೈಗೆತ್ತಿಕೊಂಡಿದ್ದು ಇದೀಗ ದುರಸ್ತಿ ಕಾರ್ಯಕ್ಕೆ ಸಂಪಾಜೆ ವಲಯ ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೋಡುಪಾಲ, ಮದೆನಾಡಿನಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಜೋಡುಪಾಲ ಸಮೀಪ ರಸ್ತೆ ಕುಸಿದು ಮಡಿಕೇರಿ ತಾಲೂಕು ಕೇಂದ್ರಕ್ಕೆ ಹಾಗೂ ಕೊಡಗಿನ ಇತರೆಡೆ ಸಂಪರ್ಕ ಅಸಾಧ್ಯವಾಗುತ್ತಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಕೇಂದ್ರಕ್ಕೆ ಅತೀ ಹತ್ತಿರ ಹಾದಿ ಇರುವ ಹಿನ್ನಲೆಯಲ್ಲಿ ದಬ್ಬಡ್ಕ- ಕಾಂತಬೈಲು-ಚೆಟ್ಟಿಮಾನಿ ರಸ್ತೆಯನ್ನು ದುರಸ್ತಿ ಮಾಡುವ ಕೆಲಸವನ್ನು ಬುಧವಾರ ಸ್ಥಳೀಯರು ಕೈಗೆತ್ತಿಕೊಂಡಿದ್ದರು.
ಆದರೆ, ರಸ್ತೆ ದುರಸ್ತಿ ಸಂದರ್ಭ ಸ್ಥಳಕ್ಕಾಗಮಿಸಿದ ಸಂಪಾಜೆ ವಲಯ ಅರಣ್ಯಾಧಿಕಾರಿ ಶಮಾ, ರಸ್ತೆ ದುರಸ್ತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ರಸ್ತೆ ಹಾದು ಹೋಗುವ ಜಾಗ ಮೀಸಲು ಅರಣ್ಯ ಭಾಗ ಬರೋದ್ರಿಂದ ಕಾರ್ಯ ಕಾನೂನು ಬಾಹಿವಾಗಿದೆ. ಮೀಸಲು ಅರಣ್ಯದಲ್ಲಿ ರಸ್ತೆ ಕೆಲಸ ಮಾಡುವುದಿದ್ದರೆ, ಪಾರೆಸ್ಟ್ ಕನ್ಸರ್ವೇಟ್ ಆಕ್ಟ್ ಪ್ರಕಾರವೇ ನಡೆಯಬೇಕು. ಅದುದರಿಂದ ಕಾನೂನು ಪ್ರಕಾರವೆ ಕೆಲಸ ಮಾಡುವುದು ಒಳಿತು ಎಂದು ಅವರು ತಿಳಿಸಿದ್ದಾರೆ.