ಮಂಗಳೂರು,ಸೆ 12(MSP) : ಸೂಕ್ತ ರೀತಿಯ ಚಿಕಿತ್ಸೆ ದೊರೆಯದ, ಅನಾಥ ವೃದ್ದರೊಬ್ಬರ ಆರೈಕೆ ಮಾಡಿ, "ಮಾನವೀಯತೆಯೇ ಶ್ರೇಷ್ಠ ಧರ್ಮ" ಎಂಬ ಸಂದೇಶ ಸಾರಿದ್ದಾರೆ ಸೂರಲ್ಪಾಡಿಯ ಎಸ್ ಡಿಪಿ ಐ ಯುವಕರು.
ಕೈಕಂಬ, ಸೂರಲ್ಪಾಡಿ ಪರಿಸರದ ಮುರ ಎಂಬಲ್ಲಿ ನಾರಯಣ ಗೌಡ ಎಂಬ ಅನಾಥ ವೃದ್ಧರೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಸೆ 10 ಸೋಮವಾರ, ತೈಲ ಬೆಲೆ ಏರಿಕೆ ವಿರುದ್ಧ ಭಾರತ್ ಬಂದ್ ಹಿನ್ನಲೆಯಲ್ಲಿ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಇರುವುದನ್ನು ಮನಗಂಡ ಎಸ್ ಡಿಪಿಐ ಯುವಕರು ಶುಶ್ರೂಷೆ ಮಾಡಿ ಜಾತಿ ಭೇದ ಮರೆತು ಮನವಿಯತೆ ಮೆರೆದಿದ್ದಾರೆ. ಎಸ್ ಡಿಪಿಐ ಕಾರ್ಯಕರ್ತರಾದ ಆರೀಫ್ ಸೂರಲ್ಪಾಡಿ, ಶಮೀರ್, ಅನ್ಸಾರ್ (ಮುರ), ಶಾಹಿದ್, ಹಫೀಲ್, ಹಸನ್ ರಾಝಿ, ಕಲಂದರ್ ಶಾಫಿ ಭಾಗವಹಿಸಿದ್ದರು.